
ತನ್ನ ಕಾರಿಗೆ ಸಣ್ಣದೊಂದು ಅಪಘಾತವಾದ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಿಕೊಂಡ 29 ವರ್ಷದ ಮಹಿಳೆಯೊಬ್ಬರ ಮೆದುಳಿನಲ್ಲಿ ಎರಡು ಸೂಜಿಗಳು ಸಿಲುಕಿದ್ದು ಕಂಡುಬಂದಿದೆ.
ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌ ಎಂಬ ಊರಿನ ಝು ಇತ್ತೀಚೆಗೆ ಕಾರು ಅಪಘಾತಕ್ಕೆ ಸಿಲುಕಿದ್ದರು. ಈ ಸಂಬಂಧ ಯಾವುದೇ ಗಾಯಗಳಾಗದೇ ಇದ್ದರೂ ಸಹ 5 ಸೆಂಮೀ ಉದ್ದದ ಎರಡು ಸೂಜಿಗಳು ಆಕೆಯ ತಲೆಬುರುಡೆಯಲ್ಲಿ ಸಿಲುಕಿದ್ದವು ಎಂದು ಸಿಟಿ ಸ್ಕ್ಯಾನ್‌ನಿಂದ ತಿಳಿದುಬಂದಿದೆ. ಆದರೂ ಸಹ ತನಗೆ ಯಾವುದೇ ರೀತಿಯ ತಲೆನೋವು ಅಥವಾ ಅಸಹನೀಯ ಅನುಭವ ಆಗಲಿಲ್ಲ ಎಂದು ಝೂ ತಿಳಿಸಿದ್ದಾರೆ.
ಝುಳನ್ನು ದತ್ತು ಪಡೆದಿದ್ದ ವೇಳೆ ಆಕೆಯ ಚಿಕ್ಕಮ್ಮ, ಆಕೆಯ ತಲೆಯ ಮೇಲೆ ಎರಡು ಕಪ್ಪು ಗುರುತುಗಳನ್ನು ಕಂಡಿದ್ದರಂತೆ. ಆದರೆ ಈ ಸೂಜಿಗಳಿಂದ ಝು ತಲೆಬುರುಡೆಯ ಪ್ರಮುಖ ಜಾಗಕ್ಕೆ ಏಟಾಗದ ಕಾರಣ ಏನೂ ತೊಂದರೆ ಆಗಿರಲಿಲ್ಲ ಎಂದು ವೈದ್ಯರು ತಿಳಿಸುತ್ತಾರೆ.