ಬ್ರೆಜಿಲ್ನ ಸೂಪರ್ ಮಾರ್ಕೆಟ್ ಒಂದರಲ್ಲಿದ್ದ ಶೆಲ್ಫ್ಗಳು ಒಂದರ ಮೇಲೊಂದು ಇದ್ದಕ್ಕಿದ್ದಂತೆ ಬೀಳುತ್ತಿದ್ದಂತೆಯೇ ಶಾಪಿಂಗ್ ಮಾಡಲು ಬಂದಿದ್ದ ಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಾವಳಿಗಳನ್ನು ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸೆರೆ ಹಿಡಿದಿದೆ.
ಉತ್ತರ ಬ್ರೆಜಿಲ್ನ ಸಾವೋ ಲೂಯಿಸ್ ಎಂಬ ಊರಿನಲ್ಲಿ ಇರುವ ಸೂಪರ್ ಮಾರ್ಕೆಟ್ನಲ್ಲಿ ಈ ಘಟನೆ ಜರುಗಿದೆ. ಘಟನೆಯಲ್ಲಿ ಒಬ್ಬ ಕೆಲಸಗಾರ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ರಾತ್ರಿ 8-15ರ ವೇಳೆ ಸೂಪರ್ ಮಾರ್ಕೆಟ್ ತುಂಬಾ ಜನರು ತುಂಬಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಾಮಾನು ಸ್ಟಾಕ್ ಮಾಡುವ ರ್ಯಾಕ್ಗಳು ಒಂದರ ಮೇಲೊಂದು ಬೀಳುತ್ತಿದ್ದಂತೆಯೇ ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಎಲ್ಲೆಡೆ ಓಡಿದ್ದಾರೆ.
ಸೂಪರ್ ಮಾರ್ಕೆಟ್ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಾಮಾನುಗಳನ್ನೆಲ್ಲಾ ಎತ್ತಿ ರಕ್ಷಣಾ ಕಾರ್ಯ ಪೂರ್ಣಗೊಳಿಸಲು ಅಗ್ನಿಶಾಮಕ ದಳದ 270 ಮಂದಿ 11 ಗಂಟೆ ನಿರಂತರ ಶ್ರಮಿಸಿದ್ದಾರೆ.