ಟಿಕ್ ಟಾಕರ್‌ಗಳು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಶಂಸೆ ಗಳಿಸಿದರೆ, ಅನೇಕರು ಅತಿರೇಕದ ವರ್ತನೆಯಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಾರೆ.
ಜಾನ್-ಪಿಚಯಾ ಫೆರ್ರಿ ಒಬ್ಬ ಟಿಕ್ ಟಾಕರ್ ಆಗಿದ್ದು, ಇತ್ತೀಚೆಗೆ ತನ್ನ ವಿಡಿಯೋಗಳ ಮೂಲಕ ಬಿರುಗಾಳಿ ಎಬ್ಬಿಸಿದ್ದಾನೆ. ಇದು ಅನೇಕರಲ್ಲಿ ಗೊಂದಲ ಮೂಡಿಸಿದೆ.
21 ವರ್ಷದ ಫೆರ್ರಿ ಟಿಕ್ ಟಾಕ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಮೂಳೆಯ ಸಂಗ್ರಹವನ್ನು ತನ್ನ ಅನುಯಾಯಿಗಳಿಗೆ ಪ್ರದರ್ಶಿಸುತ್ತಿದ್ದಾನೆ. ಸಂಗ್ರಹವು ಭ್ರೂಣದ ತಲೆಬುರುಡೆಯನ್ನು ಸಹ ಒಳಗೊಂಡಿದೆ.
ಅನೇಕರು ಇದರಿಂದ ಆಕರ್ಷಿತರಾಗಿದ್ದರೂ, ಎಲ್ಲರಿಗೂ ಇಷ್ಟವಾಗಿಲ್ಲ. ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮದ ವಿಷಯಗಳ ಬಗ್ಗೆ ನೈತಿಕ ಚರ್ಚೆಯನ್ನು ಹುಟ್ಟುಹಾಕಿವೆ.
ಫೆರ್ರಿ ತನ್ನ ಮನೆಯಿಂದ ತನ್ನ ಸಂಗ್ರಹವನ್ನು ಪ್ರದರ್ಶಿಸಿದ್ದಾನೆ. ವಿಡಿಯೋಗಳನ್ನು ಪೋಸ್ಟ್ ಮಾಡಿದ ನಂತರ ಮತ್ತು ಅವುಗಳನ್ನು ವಿಜ್ಞಾನ ಮತ್ತು ಇತರ ವಿವರಗಳನ್ನು ಚರ್ಚಿಸಿದ ನಂತರ ಆತ ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಾನೆ. ಈತ ಸ್ವತಃ ವೆಬ್‌ಸೈಟ್ ಅನ್ನು ಕೂಡ ಹೊಂದಿದ್ದು, ಅಲ್ಲಿ ತಲೆಬುರುಡೆಗಳು ಮತ್ತು ಇತರ ಮೂಳೆಗಳನ್ನು ವಿವಿಧ ಬೆಲೆಗಳಿಗೆ ಮಾರಾಟ ಮಾಡುತ್ತಾನೆ.
ದಿ ಇಂಡಿಪೆಂಡೆಂಟ್ ಪ್ರಕಾರ, ಆಸ್ಟಿಯಾಲಜಿ ಕಂಪನಿಗಳು ಮಾರಾಟ ಮಾಡುವ ತಲೆಬುರುಡೆಗಳು ಮತ್ತು ಮೂಳೆಗಳನ್ನು ಗುರುತಿಸಲಾಗದ ದೇಹಗಳಿಂದ ಪಡೆಯಲಾಗಿದೆ ಎಂದು ಹೇಳಿದೆ.
ಆಸ್ಟಿಯಾಲಜಿ ಅಂದ್ರೆ, ಅಂಗರಚನಾಶಾಸ್ತ್ರ ಮತ್ತು ಮೂಳೆಗಳ ವೈಜ್ಞಾನಿಕ ಅಧ್ಯಯನ. ಆಸ್ಟಿಯಾಲಜಿ ಅಭ್ಯಾಸ ಮಾಡುವ ವ್ಯಕ್ತಿಯನ್ನು ಆಸ್ಟಿಯಾಲಜಿಸ್ಟ್ ಎಂದು ಕರೆಯಲಾಗುತ್ತದೆ. ಇದು ಮೂಳೆಗಳ ರಚನೆ, ಅಸ್ಥಿಪಂಜರದ ಅಂಶಗಳು, ಹಲ್ಲುಗಳು, ಸೂಕ್ಷ್ಮ ಮೂಳೆ ರೂಪವಿಜ್ಞಾನ ಮತ್ತು ಇತರ ಅನೇಕ ವಿಷಯಗಳ ವಿವರವಾದ ಅಧ್ಯಯನವಾಗಿದೆ.