ಮಲಭಾದೆಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಪರಿಹರಿಸಿಕೊಳ್ಳಲು, ಗುದದ ಮೂಲಕ ಹೊಟ್ಟೆಯ ತನಕ ನೀರು ಹಾವು (ಈಲ್) ನ್ನು ಬಿಟ್ಟುಕೊಡ್ಡಿದ್ದಾನೆ.
ಆರಂಭದಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರೂ, ಕೆಲ ದಿನದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವು ತೀವ್ರಗೊಂಡಾಗ ಆಸ್ಪತ್ರೆಗೆ ತೆರಳಿ ಸಿ.ಟಿ. ಸ್ಕ್ಯಾನ್ ಮಾಡಿಸಿದಾಗ, ಹೊಟ್ಟೆಯೊಳಗೆ ಅನ್ಯ ವಸ್ತು ಇರುವುದು ಕಾಣಿಸಿದೆ. ಆದರೆ ಆರಂಭದಲ್ಲಿ ಈ ವಸ್ತು ಏನೆಂದು ತಿಳಿಯಲಿಲ್ಲ. ಬಳಿಕ ಇನ್ನಷ್ಟು ಪರೀಕ್ಷೆ ನಡೆಸಿದಾಗ ಬರೋಬ್ಬರಿ 18 ಇಂಚಿನ ಈಲ್ ಇರುವುದು ಖಚಿತವಾಗಿದೆ.
ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದಾಗ, ಈಲ್ ಸುತ್ತ ಕೀವು ಕಟ್ಟಿಕೊಂಡಿದೆ. ಇದು ಹಾಗೇ ಬಿಟ್ಟರೆ, ಜೀವಕ್ಕೆ ಅಪಾಯ ಎನ್ನುವ ಮಾತುಗಳನ್ನು ವೈದ್ಯರು ಹೇಳಿದ್ದಾರೆ.
ಈ ಎಲ್ಲ ವಸ್ತುಗಳನ್ನು ತೆಗೆದ ಬಳಿಕ ಹಿಸ್ಟರಿ ಕೇಳಿದಾಗ, ಮಲಬಾಧೆಯ ಮಾಹಿತಿಯನ್ನು ನೀಡಿದ್ದಾರೆ. ಇದೀಗ 50 ವರ್ಷದ ವ್ಯಕ್ತಿ ಗುಣಮುಖರಾಗಿದ್ದಾರೆ. ಆದರೆ ಈ ರೀತಿಯ ಚಿಕಿತ್ಸೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.