ಆಪರೇಷನ್ಗಳನ್ನ ಮಾಡುವ ವೇಳೆ ವೈದ್ಯರು ಎಷ್ಟು ಅಲರ್ಟ್ ಆಗಿದ್ದರೂ ಸಹ ಅದು ಕಡಿಮೆಯೇ. ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾದವೇ ಉಂಟಾಗಿಬಿಡಬಹುದು. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ವೈದ್ಯರ ತಂಡ ಆಪರೇಷನ್ ಥಿಯೇಟರ್ನಲ್ಲಿ ರೋಗಿಯ ಎಡಗಾಲು ಕತ್ತರಿಸೋದ್ರ ಬದಲಾಗಿ ಬಲಗಾಲನ್ನ ಕತ್ತರಿಸಿ ಹಾಕಿದೆ.
ಆಸ್ಟ್ರಿಯಾದ ಆಸ್ಪತ್ರೆಯೊಂದರಲ್ಲಿ ಇಂತಹದ್ದೊಂದು ಪ್ರಮಾದ ವರಿಯಾಗಿದೆ. ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದ ವ್ಯಕ್ತಿಯ ಎಡಗಾಲು ಸೋಂಕಿಗೆ ಒಳಗಾಗಿತ್ತು.
ಹೀಗಾಗಿ ಅವರ ಎಡಗಾಲನ್ನ ಆಪರೇಷನ್ ಮೂಲಕ ಕತ್ತರಿಸಬೇಕಾಗಿತ್ತು.
ಆದರೆ 82 ವರ್ಷದ ವ್ಯಕ್ತಿಯ ಎಡಗಾಲನ್ನ ಕತ್ತರಿಸೋದ್ರ ಬದಲು ವೈದ್ಯರು ಬಲಗಾಲನ್ನ ಕತ್ತರಿಸಿ ಹಾಕಿದ್ದಾರೆ. ವೈದ್ಯ ತಂಡದಿಂದ ದೊಡ್ಡ ಅಚಾತುರ್ಯ ನಡೆದಿದ್ದು ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಶೀಘ್ರದಲ್ಲೇ ವೃದ್ಧನ ಎಡಗಾಲನ್ನ ತೆಗೆದು ಹಾಕಲಾಗುತ್ತದೆ ಎಂದು ಆಸ್ಪತ್ರೆಯ ಎಂಡಿ ಹೇಳಿಕೆ ನೀಡಿದ್ದಾರೆ.