alex Certify ತಲೆಗೂದಲಿನ ಕಾರಣಕ್ಕೆ ವಿದ್ಯಾರ್ಥಿಯನ್ನ ಐಸೋಲೇಷನ್​ನಲ್ಲಿಟ್ಟ ಶಾಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಗೂದಲಿನ ಕಾರಣಕ್ಕೆ ವಿದ್ಯಾರ್ಥಿಯನ್ನ ಐಸೋಲೇಷನ್​ನಲ್ಲಿಟ್ಟ ಶಾಲೆ..!

ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ಬರಬಾರದು ಅಂತಾ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಾಸ್ಕ್​ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ ಇನ್ನೂ ಹಲವು ಮಾರ್ಗಸೂಚಿಗಳನ್ನ ಪಾಲಿಸುವಂತೆ ಸೂಚನೆಗಳನ್ನ ನೀಡಲಾಗಿದೆ.

ಬ್ರಿಟನ್​ನಲ್ಲಿ ಕೊರೊನಾ ಅಲೆ ತೀವ್ರವಾಗಿರೋದ್ರಿಂದ ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಜನತೆಗೆ ಮನೆಯಿಂದ ಹೊರ ಬೀಳೋಕೂ ಅವಕಾಶ ಇರಲಿಲ್ಲ. ಹೀಗಾಗಿ ಪೋಷಕರು ಮನೆಯಲ್ಲಿ ತಾವೇ ಮಕ್ಕಳಿಗೆ ಕ್ಷೌರವನ್ನೂ ಮಾಡಿದ್ದಾರೆ. ಕ್ಷೌರಿಕನಷ್ಟು ಚೆನ್ನಾಗಿ ಹೇರ್​ ಕಟ್​ ಮಾಡೋಕೆ ಪೋಷಕರಿಗೆ ಬರೋದಿಲ್ಲ. ಹೀಗಾಗಿ ಮಕ್ಕಳ ಕೂದಲನ್ನ ಹೇಗೇಗೋ ಕತ್ತರಿಸಿದ್ದಾರೆ. ಆದರೆ ಕೆಲ ಶಾಲೆಗಳು ಇದನ್ನ ಅಶಿಸ್ತು ಎಂದು ಪರಿಗಣಿಸುತ್ತಿವೆ.

ಇಂತಹದ್ದೇ ಒಂದು ಪ್ರಕರಣದಲ್ಲಿ ಬ್ರಿಟನ್​ನಲ್ಲಿ ತಾಯಿಯೊಬ್ಬರು ತನ್ನ ಮಗನ ಕೂದಲನ್ನ ತುಂಬಾ ಚಿಕ್ಕದಾಗಿ ಕತ್ತರಿಸಿದ್ದೇನೆ ಎಂಬ ಕಾರಣಕ್ಕೆ ಆತನನ್ನ ಶಾಲಾ ಆಡಳಿತ ಮಂಡಳಿ ಮೂರು ವಾರಗಳ ಐಸೋಲೇಷನ್​​ನಲ್ಲಿ ಇಟ್ಟಿದೆ ಎಂದು ಹೇಳಿದ್ದಾರೆ.

ಬ್ರಿಟನ್​ನಲ್ಲಿ ಸಲೂನ್​ಗಳು ಬಂದ್​ ಆಗಿರೋದ್ರಿಂದ ನಿಯಾಲ್​ಗೆ ಮನೆಯಲ್ಲಿಯೇ ಕ್ಷೌರ ಮಾಡಲಾಗಿತ್ತು. ಆತನ ತಾಯಿ ಹನ್ನಾ ಕ್ಲೀವ್ಸ್​ ಆತನ ತಲೆಗೂದಲನ್ನ ಕತ್ತರಿಸಿದ್ದಳು. ಆದರೆ ಆಕೆ ಅದು ತನ್ನ ಮಗನ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟುಮಾಡಬಹುದೆಂದು ಊಹಿಸಿಯೂ ಇರಲಿಲ್ಲ.

ಆದರೆ ಸೇಂಟ್​ ಮೈಕೆಲ್ಸ್​ ಚರ್ಚ್​ ಆಫ್​ ಇಂಗ್ಲೆಂಡ್​ ಹೈಸ್ಕೂಲ್​ನಲ್ಲಿ ನಿಯಾಲ್​ನನ್ನ ಪ್ರತ್ಯೇಕ ಕೊಠಡಿಯಲ್ಲಿ ಮೂರು ವಾರಗಳ ಕಾಲ ಇರಿಸಲಾಗಿತ್ತು ಎಂದು ತಾಯಿ ಆಕ್ರೋಶ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...