ಪಶ್ಚಿಮ ಬಂಗಾಳದ ರಣಘಾಟ್ ನಲ್ಲಿ ಕಳೆದ ವರ್ಷ ಒಂದು ಕಣ್ಣಿದ್ದ ಕರು ಜನಿಸಿತು. ಅದು ದೇವರ ಸ್ವರೂಪ ಎಂದು ಪ್ರಚಾರವೂ ಪಡೆದುಕೊಂಡಿತ್ತು. ಇದೀಗ ಅಂತದ್ದೇ ಒಂದು ಪ್ರಕರಣ ಇಂಡೋನೇಷ್ಯಾದಲ್ಲಿ ನಡೆದಿದೆ.
ಪಶ್ಚಿಮ ಜಾವಾದಲ್ಲಿ ಕುರಿಯೊಂದು ಒಂದು ಕಣ್ಣಿನ ಎರಡು ಮರಿಗಳಿಗೆ ಜನ್ಮನೀಡಿದ್ದು, ದುರದೃಷ್ಟವಶಾತ್ ಎರಡೂ ಮರಿಗಳು ಹುಟ್ಟಿದ ಎರಡು ದಿನಕ್ಕೇ ಸರಿಯಾಗಿ ಆಹಾರ ಸೇವಿಸಲಾಗದೆ ಮೃತಪಟ್ಟವು.
ಜೂನ್ 22ರಂದು ಪಿಪಿಹ್ ಎಂಬ ರೈತನ ಮನೆಯಲ್ಲಿ ಕುರಿ ಮರಿ ಹಾಕಿತ್ತು. ವಿರೂಪಗೊಂಡ ಮುಖದಿಂದ ಕುರಿಮರಿಗೆ ಉಸಿರಾಟದ ತೊಂದರೆಯೂ ಆಯಿತು. ಇದೇ ವೇಳೆ ನೆರೆಯವರ ಸಹಾಯ ಕೋರಿದಾಗ ಕುರಿಯು ರಾಕ್ಷಸ ರೂಪಿ ಎಂದೆಲ್ಲ ಹೇಳಿದ್ದಾರೆ. ಅದನ್ನು ನಂಬದ ರೈತ ಸಾಕಲು ನಿರ್ಧರಿಸಿದ್ದರು. ಆದರೆ ಎರಡು ದಿನಕ್ಕೆ ಅವು ಮೃತಪಟ್ಟ ನಂತರ ಹೂಳಲಾಯಿತು. ಈ ರೀತಿ ಹುಟ್ಟುವ ಮರಿಗಳು ಸೈಕ್ಲೋಪಿಯಾ ಎಂಬ ಖಾಯಿಲೆಯಿಂದ ಬಳಲುತ್ತವೆ ಎಂದು ವೈಜ್ಞಾನಿಕ ಕಾರಣಗಳೂ ಇವೆ.