
ತನ್ನ ಫಿಟ್ನೆಸ್ ಗೋಲ್‌ಗಳ ಮೂಲಕ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯಾಗಿರುವ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್‌ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ.
ಬ್ರಿಟನ್‌ನ ಟೆಲ್‌ಫೋರ್ಡ್‌ನವಳಾದ ಈ ಬಾಲೆ, ತನ್ನ ದೇಹ ತೂಕದ ದುಪ್ಪಟ್ಟು ಭಾರವನ್ನು ಹೊರಬಲ್ಲಷ್ಟು ಸಮರ್ಥಳಿದ್ದಾಳೆ. ತನ್ನ ಏಳನೇ ವಯಸ್ಸಿನಲ್ಲೇ ವೇಟ್‌ಲಿಫ್ಟಿಂಗ್ ಆರಂಭಿಸಿದ ಈ ಬಾಲಕಿ ಪ್ರತಿನಿತ್ಯ ಮುಂಜಾನೆ ಬಹಳ ಶಿಸ್ತಿನಿಂದ ಟ್ರೇನಿಂಗ್ ಮಾಡಿಕೊಂಡು ಬರುತ್ತಿದ್ದಾಳೆ.
ಈ ಕುರಿತು ಮಾತನಾಡಿದ ಬಾಲಕಿಯ ತಂದೆ ಕ್ರೇಗ್, “ನನ್ನ ಮಗಳು ಫಿಟ್ನೆಸ್ ಆಸಕ್ತಿ ಹೊಂದಿದ್ದಾಳೆ. ಆಕೆಗೆ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ಕ್ರಾಸ್‌ಫಿಟ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕನಸಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಆಟಿಕೆಗಳ ಬದಲಿಗೆ ತನಗೆ ಫಿಟ್ನೆಸ್ ಸಲಕರಣೆಯನ್ನೇ ಗಿಫ್ಟ್ ಆಗಿ ಕೊಡಿಸುವಂತೆ ಕೇಳುತ್ತಾಳೆ” ಎಂದು ತಿಳಿಸಿದ್ದಾರೆ.
https://www.instagram.com/p/CIyWwo_juuZ/?utm_source=ig_web_copy_link
https://www.instagram.com/p/CJWZrSJDZCI/?utm_source=ig_web_copy_link