ಆಸ್ಟ್ರೇಲಿಯದ ವಿದ್ಯಾರ್ಥಿಯೊಬ್ಬ ಡೈವ್ ಮಾಡುವಾಗ ಶಾರ್ಕ್ ಒಂದು ಅಚಾನಕ್ಕಾಗಿ ಸಮೀಪಿಸಿದ್ದು, ಆತನು ಕಾಲಿನಿಂದ ಒದ್ದು ಅದರ ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ.
ಉತ್ತರ ಕ್ವೀನ್ಸ್ ಲ್ಯಾಂಡ್ ನ ಕರಾವಳಿಯಲ್ಲಿ ಹದಿನೆಂಟು ವರ್ಷದ ಲಾಚ್ಲನ್ ಪೇ ಎಂಬಾತ ಡೈವ್ ಮಾಡುತ್ತಿದ್ದಾಗ ಆತನ ಕಾಲಕೆಳಗೆ ಶಾರ್ಕ್ ಹಾದು ಹೋಗುತ್ತಿರುವುದು ಕಾಣಿಸಿದೆ. ಈ ಸಂದರ್ಭದಲ್ಲಿ ಆತ ಚಿತ್ರೀಕರಣ ಮಾಡುತ್ತಿದ್ದ.
ಘಟನೆ ಬಗ್ಗೆ ವಿವರಣೆ ನೀಡಿರುವ ವಿದ್ಯಾರ್ಥಿ, ಇದೊಂದು ಎದೆ ನಡುಗಿಸುವ ಸಂದರ್ಭ, ಬಹಳ ಗಾಬರಿಯಾಗಿದ್ದೆ, ನಾನು ಸಿಲುಕಿಕೊಳ್ಳುತ್ತಿದ್ದೇನೆ ಎನಿಸಿ ಅದರಿಂದ ರಕ್ಷಿಸಿಕೊಳ್ಳಲು ಮೇಲಕ್ಕೆ ಬರುತ್ತಿದ್ದಂತೆ ಶಾರ್ಕ್ ಕಾಲಿಗೆ ಬಾಯಿ ಹಾಕಿತು. ಕಾಲಿನಲ್ಲಿದ್ದ ಫ್ಲಿಪರ್ ಅದಕ್ಕೆ ಸಿಲುಕಿತು. ಆದರೆ ಕಾಲಿಗೆ ಏನೂ ಆಗದೆ ನಾನು ಪಾರಾದೆ ಎಂದು ಹೇಳಿದ್ದಾನೆ.
ಆತ ತೆಗೆದ ಫೋಟೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೂರಾರು ಮಂದಿ ದಿಗ್ಭ್ರಮೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
https://www.facebook.com/permalink.php?story_fbid=1121719368166526&id=100009854197750