ಹೆಚ್ಚುತ್ತಿರುವ ಕೊರೊನಾ ಕೇಸ್ಗಳನ್ನ ಗಮನದಲ್ಲಿಟ್ಟುಕೊಂಡು ಪಶ್ಚಿಮ ಆಫ್ರಿಕಾದ ಸೀಶೆಲ್ಸ್ ರಾಷ್ಟ್ರ ಕೊರೊನಾ ಲಸಿಕೆಯ 2 ಡೋಸ್ ಪಡೆದು 2ವಾರಗಳನ್ನ ಪೂರೈಸಿದ ಹಾಗೂ ಕೊರೊನಾ ನೆಗೆಟಿವ್ ವರದಿ ಹೊಂದಿರುವ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಯಾಣಿಕರಿಗೆ ಮಾತ್ರ ದೇಶ ಪ್ರವೇಶಕ್ಕೆ ಅನುಮತಿ ನೀಡಿದೆ.
ಇತ್ತ ಥೈಲ್ಯಾಂಡ್ ತನ್ನ ರಾಷ್ಟ್ರದ ಪ್ರಜೆಗಳಲ್ಲದವರಿಗೆ ಮೇ 1ರಿಂದ ಭಾರತದಿಂದ ಆಗಮಿಸಲು ನಿರ್ಬಂಧ ಹೇರಿದೆ. ಸೀಶೆಲ್ಸ್ ಭಾರತದ ಜೊತೆ ಏರ್ ಬಬಲ್ಸ್ ಒಪ್ಪಂದವನ್ನ ಹೊಂದಿದೆ. ಆದರೆ ಭಾರತದ ಜೊತೆ ಥೈಲ್ಯಾಂಡ್ ಈ ಯಾವುದೇ ಒಪ್ಪಂದವನ್ನ ಹೊಂದಿಲ್ಲ.
ಈ ಸಂಬಂಧ ಬುಧವಾರ ಮಾಹಿತಿ ಒದಗಿಸಿದ ಸೀಶೆಲ್ಸ್ ಪ್ರವಾಸೋದ್ಯಮ ಬೋರ್ಡ್ ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನ ಪಡೆದ 2 ವಾರ ಕಳೆದ ಹಾಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿರುವ ಬಾಂಗ್ಲಾ, ಭಾರತ ಹಾಗೂ ಪಾಕಿಸ್ತಾನದ ಪ್ರಜೆಗಳಿಗೆ ಮಾತ್ರ ದೇಶಕ್ಕೆ ಎಂಟ್ರಿ ನೀಡಲು ಅವಕಾಶ ನೀಡಲಾಗುತ್ತೆ ಎಂದು ಪ್ರಕಟಣೆ ಹೊರಡಿಸಿದೆ.
ವಿಮಾನದಿಂದ ಹೊರಡುವ 72 ಗಂಟೆಗಳ ಮುನ್ನ ನಡೆಸಲಾದ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಇದಾದ ಬಳಿಕ ಪ್ರಯಾಣಿಕರಿಗೆ ಯಾವುದೇ ಕ್ವಾರಂಟೈನ್ ನಿರ್ಬಂಧ ಇರೋದಿಲ್ಲ.