ಫಿಲಿಪೈನ್ಸ್ ನಲ್ಲಿ ಜಾರಿಯಲ್ಲಿರುವ ಕಾನೂನು ಲೈಂಗಿಕ ಅಪರಾಧ ಪ್ರಕರಣವನ್ನು ಹೆಚ್ಚಿಸಿದೆ. 12 ವರ್ಷದ ಮಕ್ಕಳ ಜೊತೆ ಇಲ್ಲಿ ಒಪ್ಪಿಗೆ ಮೇಲೆ ಸಂಭೋಗ ಬೆಳೆಸಬಹುದು. ಇದ್ರಿಂದಾಗಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಈ ಕಾನೂನು ಬದಲಿಸುವಂತೆ ಒತ್ತಡ ಹೆಚ್ಚಾಗಿದ್ದು, ಸರ್ಕಾರ ಬದಲಾವಣೆ ಕೆಲಸ ಶುರು ಮಾಡಿದೆ.
ಫಿಲಿಪೈನ್ಸ್ ನಲ್ಲಿ ವಯಸ್ಕ ಮಹಿಳೆಯರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಅತ್ಯಾಚಾರ ಘಟನೆ ನಡೆಯುತ್ತಿದೆ. ಅಲ್ಲಿ ಪ್ರತಿ ಐದು ಮಕ್ಕಳಲ್ಲಿ ಒಬ್ಬರ ಮೇಲೆ ಅತ್ಯಾಚಾರ ನಡೆಯುತ್ತದೆ. ಲಾಕ್ ಡೌನ್ ಸಮಯದಲ್ಲಿ ಈ ಘಟನೆಗಳಲ್ಲಿ ಏರಿಕೆ ಕಂಡು ಬಂದಿದೆ. ಈಗಾಗಲೇ ಹೊಸ ಕಾನೂನು ರಚನೆಯಾಗಿದೆ. ಸಂಸತ್ತಿನ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಮೇಲ್ಮನೆ ಒಪ್ಪಿಗೆ ನಂತ್ರ ಮಸೂದೆ ಜಾರಿಗೆ ಬರಲಿದೆ. ಹೊಸ ಕಾನೂನಿನ ಪ್ರಕಾರ 12 ವರ್ಷವನ್ನು 16 ವರ್ಷಕ್ಕೆ ಏರಿಸಲಾಗುವುದು.
ಫಿಲಿಪೈನ್ಸ್ ನಲ್ಲಿ ಕ್ಯಾಥೊಲಿಕ್ ಸಂಖ್ಯೆ ಹೆಚ್ಚಿದೆ. ಇಲ್ಲಿ ವಿಚ್ಛೇದನ ಕಾನೂನು ಬಾಹಿರವಾಗಿದೆ. ಮುಸ್ಲಿಂ ಹೊರತುಪಡಿಸಿ ಈ ದೇಶದಲ್ಲಿ ಬೇರೆ ಯಾವುದೇ ಜನಾಂಗದವರು ವಿಚ್ಛೇದನ ನೀಡಿದ್ರೆ ಅದನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ.