ಕೊರೊನಾ ವೈರಸ್ನಿಂದಾಗಿ ಜಗತ್ತು ಕಳೆದ ವರ್ಷದಿಂದ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಕುಟುಂಬಸ್ಥರಿಂದ ದೂರವಿರಬೇಕಾದ ಅನಿವಾರ್ಯತೆ ಈಗಲೂ ಇದೆ. ಇದೇ ರೀತಿ ವೃದ್ಧ ದಂಪತಿ ಕೊರೊನಾದಿಂದ ತಿಂಗಳುಗಟ್ಟಲೇ ಒಬ್ಬರಿಂದ ಒಬ್ಬರು ದೂರವಿದ್ದರು. ಇದೀಗ ಆ ದಂಪತಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದು ಈ ಅಮೂಲ್ಯ ಕ್ಷಣದ ವಿಡಿಯೋ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.
ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಗೋರ್ಡಾನ್ ಎಂಬ ವೃದ್ಧ ತನ್ನ ಪತ್ನಿಯನ್ನ ಬಹಳ ದಿನದ ಬಳಿಕ ಭೇಟಿಯಾಗಿದ್ದಾರೆ. ಆಕೆ ಪತಿಯನ್ನ ಕಂಡ ಬಳಿಕ ಸಖತ್ ಖುಶ್ ಆದರು. ಮಾತ್ರವಲ್ಲದೇ ಸಂತಸದಿಂದ ಪತಿಯ ಬಳಿಗೆ ನಡೆದುಕೊಂಡು ಹೋದರು. ಹಾಗೂ ವಾಕರ್ನ್ನು ಪಕ್ಕಕ್ಕೆ ಸರಿಸಿ ಪತಿಗೆ ಮುತ್ತನ್ನ ನೀಡಿದ್ದಾರೆ.
ಇಬ್ಬರ ಆರೋಗ್ಯದಲ್ಲೂ ಏರುಪೇರು ಕಂಡು ಬಂದ ಹಿನ್ನೆಲೆ ಈ ವೃದ್ಧ ದಂಪತಿಯನ್ನ ಪ್ರತ್ಯೇಕವಾಗಿ ಇರಿಸಲಾಗಿತ್ತು. ಇದಿಗ ಈ ದಂಪತಿಯನ್ನ ಒಂದೇ ಕೇರ್ ಹೊಮ್ಗೆ ಆಸ್ಪತ್ರೆ ಸಿಬ್ಬಂದಿ ಸೇರಿಸಿದ್ದಾರೆ.
ಕೊರೊನಾದಿಂದಾಗಿ ಪತ್ನಿ ಮೇರಿಯನ್ನ ನೋಡದೇ ಬಹಳ ದಿನವಾಗಿದ್ದರಿಂದ ಗೋರ್ಡಾನ್ ತಮ್ಮ ಪತ್ನಿಗೆ ಸಪ್ರೈಸ್ ನೀಡಲು ನಿರ್ಧರಿಸಿದ್ರು. ಹೀಗಾಗಿ ಪತ್ನಿಗೆ ಮೊದಲು ಸುಳಿವನ್ನೇ ನೀಡದೇ ನೇರವಾಗಿ ಆಕೆಯನ್ನ ಭೇಟಿಯಾಗುವ ಮೂಲಕ ಪತ್ನಿಯ ಸಂತೋಷಕ್ಕೆ ಕಾರಣರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.