ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ಇದನ್ನ ಹಾರುವ ತಟ್ಟೆ ಇರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ ಇದೊಂದು ಕೈಗಾರಿಕಾ ಪ್ರದೇಶದಲ್ಲಿ ಆದ ಸಮಸ್ಯೆಯಿಂದಾಗಿ ಈ ರೀತಿ ದೃಶ್ಯ ಕಂಡಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಕಳೆದ ವಾರ ಕೂಡ ಸೆಕ್ಯೂರಿಟಿ ಕ್ಯಾಮರಾವೊಂದರಲ್ಲಿ ಇದೇ ರೀತಿಯ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಂಡು ಬಂದಿರುವ ದೃಶ್ಯ ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪ್ರತಿ ಬಾರಿಯಂತೆಯೇ ಈ ಬಾರಿಯೂ ಸಹ ಇದೊಂದು ಹಾರುವ ತಟ್ಟೆ ಆಗಿರಬಹುದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳನ್ನು ಕಾಡುವ ಕೊರೊನಾ ಲಕ್ಷಣ ಯಾವುದು….?
ವಿಡಿಯೋದ ಸಣ್ಣ ತುಣುಕನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿದೆ. ಇನ್ನೊಂದು ಕ್ಯಾಮರಾದಲ್ಲಿ ಸೆರೆಯಾದ ಇದೇ ದೃಶ್ಯದಲ್ಲಿ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ತೇಲುತ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋ ಟಿಕ್ಟಾಕ್ನಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಇದೂ ಸಹ ಹಾರುವ ತಟ್ಟೆಯೇ ಇರಬೇಕು ಎಂದು ಅಂದಾಜಿಸಿದ್ದಾರೆ.
ಆದರೆ ತಜ್ಞರು ಇದು ಹಾರುವ ತಟ್ಟೆ ಆಗಿರೋಕೆ ಸಾಧ್ಯವಿಲ್ಲ ಎಂದು ಅಂದಾಜಿಸಿದ್ದಾರೆ. ಈ ರೀತಿಯ ಅನೇಕ ದೃಶ್ಯಗಳು ತೀರಾ ಇತ್ತೀಚಿಗೆ ವಿಶ್ವದ ಕೆಲ ಪ್ರದೇಶಗಳಲ್ಲಿ ಕಂಡುಬಂದಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ತಜ್ಞರು ಈ ಹೇಳಿಕೆ ನೀಡಿದ್ದಾರೆ.
ಎಲೆಕ್ಟ್ರಿಕ್ ಟ್ರಾನ್ಸ್ಫೋರ್ಮರ್ ಬಾಕ್ಸ್ ಸ್ಫೋಟಗೊಂಡರೂ ಸಹ ಈ ರೀತಿ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತೆ ಎಂದು ಹೇಳಿದ್ದಾರೆ.