
ಕೊರಿಯರ್ ಬಾಯ್ ಮನೆ ಬಾಗಿಲಲ್ಲಿ ಇಟ್ಟು ಹೋಗಿದ್ದ ಪಾರ್ಸೆಲ್ ಒಂದನ್ನು ಯುವತಿಯೊಬ್ಬರು ಹಗಲು ವೇಳೆಯಲ್ಲಿ ಅನಾಮತ್ತಾಗಿ ಕದಿಯುವ ವಿಡಿಯೋ ವೈರಲ್ ಆಗಿದೆ.
ಮನೆ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳಿಯ ಚಾಕಚಕ್ಯತೆ ಸೆರೆಯಾಗಿದ್ದು, ಆ ವಿಡಿಯೋ ಕ್ಲಿಪ್ ಟ್ವೀಟರ್ ಸೇರಿ ಬೇರೆ ಬೇರೆ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಎಲ್ಲಿ ನಡೆದಿದ್ದೆಂಬುದು ಮಾತ್ರ ಅಸ್ಪಷ್ಟ. ಯುವತಿಯು ಬರಿಗಾಲಲ್ಲಿದ್ದು, ಆಕೆ ಸ್ಥಳೀಯರೇ ಇರಬಹುದೆಂದು ಅಂದಾಜಿಸಲಾಗಿದೆ.
ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!
ಕೊರಿಯರ್ ಬಾಯ್ಗಳು ಆಗಾಗ್ಗೆ ಪಾರ್ಸೆಲ್ ಅನ್ನು ಸ್ವೀಕರಿಸುವವರ ಮನೆ ಬಾಗಿಲಲ್ಲಿ ಬಿಟ್ಟುಹೋಗುತ್ತಾರೆ. ಆದರೆ ಈ ಪಾರ್ಸೆಲ್ ಮೇಲೆ ಕಳ್ಳಿಯ ಆಸಕ್ತಿ ಅಚ್ಚರಿಗೆ ಕಾರಣವಾಗಿದೆ.