ಉಪ್ಪು ನೀರಿನಲ್ಲಿ ಜೀವಿಸುವ ಮೀನು ಸೀ ಹಾರ್ಸ್. ಈ ಸಮುದ್ರ ಜೀವಿಯ ಮುಖ ಕುದುರೆಯನ್ನು ಹೋಲುವ ಕಾರಣ ಇದನ್ನು ಕಡಲ ಕುದುರೆ ಎಂದು ಕರೆಯುತ್ತಾರೆ.
ಜಗತ್ತಿನಲ್ಲಿ ಸುಮಾರು 50 ಜಾತಿಯ ಕಡಲ ಕುದುರೆಗಳಿವೆ. ಗಂಡು ಕಡಲು ಕುದುರೆಯ ಹೊಟ್ಟೆಯಲ್ಲಿ ಒಂದು ಚೀಲವಿರುತ್ತದೆ. ಈ ಚೀಲದಲ್ಲಿ ಹೆಣ್ಣು ಕುದುರೆ ಮೊಟ್ಟೆಗಳನ್ನಿಡುತ್ತದೆ. ಗಂಡಿನ ಹೊಟ್ಟೆಯಲ್ಲಿನ ಆ ಚೀಲದಲ್ಲೇ ಮೊಟ್ಟೆಗಳು ಬೆಳೆಯುತ್ತವೆ. ಸುಮಾರು 45 ದಿನಗಳಲ್ಲಿ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಕಡಲ ಕುದುರೆ ಒಮ್ಮೆಗೆ ಸುಮಾರು 2000 ಮರಿಗಳನ್ನು ಹಾಕುತ್ತದೆ.
ಹೆಚ್ಚು ಆಳವಿಲ್ಲದ ಸಮುದ್ರದ ನೀರಿನಲ್ಲಿ ವಾಸಿಸುವ ಇದು ಬೇಸಿಗೆಯಲ್ಲಿ ಮಾತ್ರ ಕಾಣಿಸುತ್ತದೆ. ಚಳಿಗಾಲ ಬಂತೆಂದರೆ ಕಡಲ ಕುದುರೆ ಎಲ್ಲಿಗೆ ಹೋಗುತ್ತದೆ ಎಂಬುದೇ ತಿಳಿದಿಲ್ಲ. ಕಡಲ ಕುದುರೆಗೆ ಶತ್ರುಗಳ ಭಯವಿಲ್ಲ. ಏಕೆಂದರೆ ಇದನ್ನು ಯಾರೂ ತಿನ್ನುವುದಿಲ್ಲ. ಬೇರಾವ ಕಡಲ ಮೀನುಗಳೂ ಕೂಡ ಇದನ್ನು ತಿನ್ನುವುದಿಲ್ಲ.