alex Certify 145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..!

ಈಜಿಪ್ಟ್​ನ ಸದ್ದಾಂ ಅಲಿ ಕಿಲಾನಿ ಎಂಬವರು 145 ಗಂಟೆಗಳ ಕಾಲ ಕೆಂಪು ಸಮುದ್ರದಲ್ಲಿ ಮುಳುಗಿರುವ ಮೂಲಕ ಸ್ಕೂಬಾ ಡೈವಿಂಗ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಈ ವಿಡಿಯೋ ಈಗ ವೈರಲ್​ ಆಗಿದೆ.

ದಹಾಬ್​ ತೀರದಲ್ಲಿ 145 ಗಂಟೆ 30 ನಿಮಿಷಗಳ ಕಾಲ ಇರುವ ಮೂಲಕ ನವೆಂಬರ್​ 5ರಂದು ಈ ದಾಖಲೆ ಮಾಡಿದ್ದಾರೆ. 2017ರಲ್ಲಿ ಸದ್ದಾಂ 121 ಗಂಟೆಗಳ ಕಾಲ ಸ್ಕೂಬಾ ಡೈವಿಂಗ್​ ಮಾಡಿದ್ದರು. 2016ರಲ್ಲಿ 142 ಗಂಟೆ 47 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್​ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದ ಸೆರ್ನ್​ ಕೆರಬೆ ಸಾಧನೆಯನ್ನ ಸದ್ದಾಂ ಸರಿಗಟ್ಟಿದ್ದಾರೆ.

ಸದ್ದಾಂ 150 ಗಂಟೆಗಳ ಕಾಲ ನೀರಿನಲ್ಲಿ ಮುಳುಗುವ ಯೋಜನೆ ಹೊಂದಿದ್ದರಂತೆ. ಆದರೆ ಅವರ ಆರೋಗ್ಯದ ದೃಷ್ಟಿಯಿಂದ ಸದ್ದಾಂರನ್ನ ನಾಲ್ಕೂವರೆ ಗಂಟೆಗಳ ಮುಂಚೆಯೇ ನೀರಿನಿಂದ ಹೊರತೆಗೆಯಲಾಗಿದೆ. ಸದ್ದಾಂ ವಿಶ್ವ ದಾಖಲೆ ನಿರ್ಮಿಸಿದ್ದರೂ ಸಹ ಇನ್ನೂ ಗಿನ್ನೆಸ್​​ ರೆಕಾರ್ಡ್ ನಲ್ಲಿ ಸೇರಿಸಲಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...