ನಿಮ್ಮ ಅರಿವಿಗೇ ಇಲ್ಲದ ಅಂಗವೊಂದು ನಿಮ್ಮ ಗಂಟಲಿನಲ್ಲಿ ಇದೆ ಎಂದು ನಿಮಗೆ ಗೊತ್ತೇ?
ಪ್ರೊಸ್ಟೇಟ್ ಕ್ಯಾನ್ಸರ್ ಸಂಬಂಧ ಅಧ್ಯಯನ ಮಾಡುತ್ತಿದ್ದ ನೆದರ್ಲೆಂಡ್ಸ್ ವಿಜ್ಞಾನಿಗಳ ತಂಡವೊಂದು ಮಾನವನ ಗಂಟಲಿನಲ್ಲಿ ಹೊಸ ಅಂಗವೊಂದನ್ನು ಶೋಧಿಸಿರುವುದಾಗಿ ತಿಳಿಸಿದೆ. ಮಾನವರ ಗಂಟಲಿನಲ್ಲಿ ಎರಡು ಬಗೆಯ ಸಲೈವರಿ ಗ್ರಂಥಿಗಳಿದ್ದು, ’ಟುನಾರಿಯಲ್ ಗ್ರಂಥಿ’ಗಳನ್ನು ಈ ಹಿಂದೆ ನಿರ್ಲಕ್ಷಿಸಲಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಗಂಟಲಿನ ಮೇಲ್ಭಾಗವನ್ನು ನಯಗೊಳಿಸುವ ಸಲೈವರಿ ಗ್ರಂಥಿಗಳ ಗುಚ್ಛವೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. Radiotherapy and Oncology ಜರ್ನಲ್‌ನಲ್ಲಿ ವಿಜ್ಞಾನಿಗಳ ಈ ಪತ್ತೆಯನ್ನು ಪ್ರಕಟಿಸಲಾಗಿದೆ.
ಇದೇ ವಿಚಾರವನ್ನು ಖಾತ್ರಿ ಮಾಡಿಕೊಳ್ಳಲು 100 ಜನರ ಮೇಲೆ ಸಂಶೋಧನೆ ನಡೆಸಿದ್ದು, ಅವರೆಲ್ಲರ ಗಂಟಲುಗಳಲ್ಲೂ ಸಹ ಈ ಗ್ರಂಥಿಗಳು ಇದ್ದಿದ್ದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.