ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೆ. ಆದರೆ ಯಾವ ರೀತಿಯಲ್ಲಿ ವೈರಸ್ ದಾಳಿ ಮಾಡುತ್ತೆ ಅನ್ನೋದು ವೈದ್ಯಲೋಕಕ್ಕೆ ಇನ್ನೂ ಸವಾಲಾಗಿ ಉಳಿದಿರೋ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಸಲುವಾಗಿ ಕೃತಕ ಶ್ವಾಸಕೋಶವನ್ನ ಸೃಷ್ಟಿಸಿ ಅದರ ಮೇಲೆ ಕೊರೊನಾ ವೈರಸ್ ಹೇಗೆ ದಾಳಿ ಮಾಡುತ್ತೆ ಅನ್ನೋದನ್ನ ಪರಿಶೀಲಿಸಿದ್ದಾರೆ.
ದಕ್ಷಿಣ ಕೊರಿಯಾ ಹಾಗೂ ಯುಕೆಯ ಸಂಶೋಧಕರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಜೊತೆಗೂಡಿ ಇಂತಹದ್ದೊಂದು ಅನ್ವೇಷಣೆ ನಡೆಸಿದ್ದಾರೆ, ವೈರಸ್ ದಾಳಿಗೊಳಗಾದ ಶ್ವಾಸಕೋಶದಲ್ಲಿ ಯಾವ ರೀತಿಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನ ವೀಕ್ಷಿಸಿದ್ದಾರೆ.
‘ವೈರಸ್ ದಾಳಿಗೊಳಗಾದ 6 ತಾಸುಗಳಲ್ಲಿ ಜೀವಕೋಶಗಳು ಪ್ರೋಟಿನ್ ಬಿಡುಗಡೆ ಮಾಡುವ ಮೂಲಕ ಪಕ್ಕದ ಜೀವಕೋಶಗಳನ್ನ ಎಚ್ಚರಿಸುತ್ತವೆ. 48 ತಾಸುಗಳ ಬಳಿಕ ಜೀವಕೋಶಗಳು ವೈರಸ್ ವಿರುದ್ಧ ಹೋರಾಟ ನಡೆಸೋಕೆ ಆರಂಭಿಸುತ್ತೆ. 60 ತಾಸುಗಳ ಬಳಿಕ ಕೊರೊನಾದ ದಾಳಿಗೆ ಒಳಗಾದ ಜೀವಕೋಶಗಳು ಸಾಯೋಕೆ ಶುರು ಮಾಡುತ್ತವೆ ಎನ್ನಲಾಗಿದೆ.