60 ದಶಲಕ್ಷ ವರ್ಷಗಳ ಹಿಂದೆ ಡೈನಾಸಾರ್ ಎಂಬ ಪ್ರಾಣಿ ಭೂಮಿಯ ಮೇಲಿತ್ತು ಎಂಬುದನ್ನ ಕಂಡು ಹಿಡಿದಿದ್ದ ಸಂಶೋಧಕರು ಇದೀಗ ಜಗತ್ತಿನ ಅತಿ ದೊಡ್ಡ ಪಕ್ಷಿಯನ್ನೂ ಕಂಡು ಹಿಡಿದಿದ್ದಾರೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹಕ್ಕಿಯ ಹೆಸರು ರಿವೀಲ್ ಆಗಿದೆ.
1980ರ ದಶಕದಲ್ಲಿ ಅಂಟಾರ್ಟಿಕಾ ಭಾಗದಲ್ಲಿ ಪಳೆಯುಳಿಕೆ ರೂಪದಲ್ಲಿ ಸಿಕ್ಕ ಪೆಲಾಗೋರ್ನಿಥಿಡ್ಸ್ ಎಂಬ ಪಕ್ಷಿ ವಿಶ್ವದಲ್ಲೇ ಅತ್ಯಂತ ದೊಡ್ಡ ಹಕ್ಕಿ ಪ್ರಬೇಧವಾಗಿದೆ.
ಈ ಪಕ್ಷಿಯ ಕಾಲು ಮೂಳೆ ಹಾಗೂ ದವಡೆಗಳು ಅಂಟಾರ್ಟಿಕ್ ಪರ್ಯಾಯ ದ್ವೀಪದಲ್ಲಿರುವ ಸೆಮೌರ್ನಲ್ಲಿ ಪತ್ತೆ ಹಚ್ಚಲಾಗಿತ್ತು. ಗರಗಸ ಆಕಾರದ ಹಲ್ಲುಗಳು ಹಾಗೂ ಉದ್ದನೆಯ ಕೊಕ್ಕನ್ನ ಹೊಂದಿರುವ ಪೆಲಗಾರ್ನಿಥಿಡ್ಗಳನ್ನ ಎಲುಬಿನ ಹಕ್ಕಿ ಎಂದೂ ಕರೆಯಲಾಗುತ್ತಿತ್ತು. ಈ ಹಕ್ಕಿಗಳು ಮೀನನ್ನ ಬೇಟೆಯಾಡೋದ್ರಲ್ಲಿ ಭಾರೀ ನಿಪುಣರಾಗಿದ್ದವಂತೆ.