ನಮ್ಮ ಸೌರವ್ಯೂಹಕ್ಕಿಂತ ಐದು ಪಟ್ಟು ದೊಡ್ಡದಾದ ಕಪ್ಪುರಂಧ್ರ ಪತ್ತೆಯಾಗಿದ್ದು, J2157 ಎಂದು ಹೆಸರಿಸಲಾಗಿದೆ. ದಿನವೊಂದಕ್ಕೆ ಸೂರ್ಯನಲ್ಲಿನ ದ್ರವ್ಯರಾಶಿಗೆ ಸಮಾನವಾದ ಧೂಳು ಮತ್ತು ಆಮ್ಲವನ್ನು ಒಡಲೊಳಕ್ಕೆ ತುಂಬಿಕೊಳ್ಳುತ್ತಿದೆ. ಅಂದರೆ, ನಮ್ಮ ಸೌರವ್ಯೂಹದಲ್ಲಿನ ಸೂರ್ಯನನ್ನೇ ನುಂಗುವಷ್ಟು ಆಹಾರವನ್ನ ಅದು ಆಪೋಶನಗೈಯ್ಯುತ್ತಿದೆ.
ಬ್ರಹ್ಮಾಂಡದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಈ ದೈತ್ಯ ಕಪ್ಪು ಕುಳಿ 2018 ರಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾದಾಗ 20 ಶತಕೋಟಿ ದ್ರವ್ಯರಾಶಿಯನ್ನು ಒಡಲೊಳಗೆ ಇಟ್ಟುಕೊಂಡಿತ್ತು. ಈಗ ಅದರ ಅಗಾಧತೆಯು 34 ಶತಕೋಟಿ ಸೂರ್ಯನಲ್ಲಿನ ದ್ರವ್ಯರಾಶಿಯಷ್ಟಾಗಿದೆ. ಅಷ್ಟರ ಮಟ್ಟಿಗೆ ಬೆಳೆಯುತ್ತಿದೆ.
ಈ ಕಪ್ಪುಕುಳಿಯ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ವಿವಿ ಕ್ರಿಸ್ಟೋಫರ್ ಎ ಒಂಕೇನ್ ಇದರ ಅಗಾಧತೆಯನ್ನು ವಿವರಿಸಿದ್ದು, ನಮ್ಮ ಆಕಾಶಗಂಗೆ ನಕ್ಷತ್ರಪುಂಜದಲ್ಲಿರುವ ಕಪ್ಪುರಂಧ್ರವಾದ ಸಗಿಟ್ಟಾರಿಯಸ್ ಗಿಂತ 8 ಸಾವಿರ ಪಟ್ಟು ಇದು ದೊಡ್ಡದಾಗಿದೆ. ಇದು ಬಹುದೂರದಲ್ಲಿದ್ದು, ಇದರ ಗುರುತ್ವ ಶಕ್ತಿ ಬಗ್ಗೆಯೂ ಅಧ್ಯಯನ ಮುಂದುವರಿಯುತ್ತಿದೆ. ಎಲ್ಲವನ್ನೂ ನುಂಗಿ ದೊಡ್ಡದಾಗುವ ಬದಲು ಸ್ವಲ್ಪ ಡಯಟ್ (ಪಥ್ಯ) ಮಾಡುವುದು ಒಳಿತು ಎಂದು ಚಟಾಕಿ ಹಾರಿಸಿದ್ದಾರೆ.