ವಿಶ್ವವನ್ನು ಬಾಧಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಅವಶ್ಯವಿರುವ ವಿನೂತನ ತಂತ್ರಜ್ಞಾನದ ಮಾಸ್ಕ್ ಅನ್ನು ಕಂಡು ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಎಸಿಎಸ್ ನ್ಯಾನೋ ಜರ್ನಲ್ ಪ್ರಕಾರ, ಗ್ರಫೇನ್ ನಿಂದ ತಯಾರಿಸಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮಾಸ್ಕ್ ಅನ್ನು ಕಂಡುಹಿಡಿಯಲಾಗಿದೆ. ಇದು ಶೇ.80 ರಷ್ಟು ಕಾರ್ಯನಿರ್ವಹಿಸಲಿದೆ. ಇನ್ನು ಈ ಮಾಸ್ಕ್ ಧರಿಸಿ 10 ನಿಮಿಷಗಳ ಕಾಲ ಸೂರ್ಯ ಬೆಳಕಿಗೆ ನಿಂತರೆ ಶೇ.100 ರಷ್ಟು ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. ಇದರಿಂದ ಕಡಿಮೆ ಮೊತ್ತದಲ್ಲಿ ಉತ್ತಮ ಗುಣಮುಟ್ಟದ ಮಾಸ್ಕ್ ತಯಾರಿಸಬಹುದು ಎಂದು ಹೇಳಲಾಗಿದೆ.
ಗ್ರಫೇನ್ ಮಾಸ್ಕ್ ಬಳಸುವುದರಿಂದ, ಕಡಿಮೆ ಮೊತ್ತಕ್ಕೆ ಮಾಸ್ಕ್ ತಯಾರಿಸುವುದರೊಂದಿಗೆ, ಕಚ್ಚಾ ವಸ್ತುಗಳ ಸಮಸ್ಯೆಯಿರುವುದಿಲ್ಲ. ಇದರೊಂದಿಗೆ ಬ್ಯಾಕ್ಟೀರಿಯಾ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಲಾಗಿದೆ. ಈ ಸಂಶೋಧನೆಯ ಮುಖ್ಯಸ್ಥ ಡಾ. ರುಕ್ವೀಯನ್ ಪ್ರಕಾರ, ಗ್ರಫೇನ್ ಬಳಕೆಯಿಂದ ಬ್ಯಾಕ್ಟೀರಿಯಾವನ್ನು ತಡೆಗಟ್ಟಬಹುದು. ಕೊರೊನಾಕ್ಕೆ ಮೊದಲೇ ಈ ಬಗ್ಗೆ ಸಂಶೋಧನೆ ನಡೆಸಲಾಗಿತ್ತು ಎಂದಿದ್ದಾರೆ.
ಈ ರೀತಿಯ ಮಾಸ್ಕ್ ಬಳಕೆಯಿಂದ ಕಲುಷಿತ ಪ್ರದೇಶದಲ್ಲಿ ಹೋದಾಗ ಮಾಸ್ಕ್ ಮೇಲಿರುವ ಬ್ಯಾಕ್ಟೀರಿಯಾ ಪುನಃ ದೇಹ ಸೇರುವ ಸಾಧ್ಯತೆಯಿರುತ್ತದೆ. ಗ್ರಫೇನ್ ಬಳಕೆಯಿಂದ ಇದನ್ನು ತಡೆಗಟ್ಟಬಹುದು ಎಂದಿದ್ದಾರೆ.