alex Certify Big News: ʼಎʼ ರಕ್ತಕಣವನ್ನೂ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಿದೆ ಈ ಹೊಸ ಸಂಶೋಧನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ʼಎʼ ರಕ್ತಕಣವನ್ನೂ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಿದೆ ಈ ಹೊಸ ಸಂಶೋಧನೆ..!

ಕೆನಡಾದ ವಿಜ್ಞಾನಿಗಳು ಒಂದು ಹೊಸ ಅನ್ವೇಷಣೆಯನ್ನ ಮಾಡಿ ತೋರಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಜ್ಞಾನಿಗಳು ವಿಶೇಷ ರೀತಿಯ ಬ್ಯಾಕ್ಟೀರಿಯಲ್​ ಎಂಜೈಮ್​​ ನ್ನ ಬಳಕೆ ಮಾಡಿ ಎ ರಕ್ತಕಣವನ್ನ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಬಹುದು ಎಂದು ಸಾಬೀತುಪಡಿಸಿದ್ದಾರೆ. ಈ ಹೊಸ ಸಂಶೋಧನೆಯಿಂದಾಗಿ ವಿಶ್ವದಲ್ಲಿ ಒ ರಕ್ತ ಕಣದ ಜೊತೆಯಲ್ಲಿ ಇನ್ಮೇಲೆ ಎ ರಕ್ತ ಕಣವನ್ನೂ ಯೂನಿವರ್ಸಲ್​ ಡೋನರ್​​ ಆಗಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಕೆನಡಾ ವಿಜ್ಞಾನಿಗಳ ಈ ಅನ್ವೇಷಣೆಯಿಂದಾಗಿ ಆಸ್ಪತ್ರೆಗಳಲ್ಲಿ ಇನ್ಮೇಲೆ ರಕ್ತದ ಕೊರತೆ ಉಂಟಾಗೋದಿಲ್ಲ ಎಂದು ಅಂದಾಜಿಸಲಾಗಿದೆ.

ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯ ಪ್ರಕಾರ ವಿಜ್ಞಾನಿಗಳು ಮನುಷ್ಯರಲ್ಲಿ ಗಟ್​​ ಮೈಕ್ರೋಬ್ಸ್​ನ್ನು ಕಂಡು ಹಿಡಿದಿದ್ದು ಇದರಿಂದ 2 ವಿಧವಾದ ಎಂಜೈಮ್​ಗಳು ಸಿಗಲಿದೆ. ವಿಜ್ಞಾನಿಗಳು ಈ ಎಂಜೈಮ್​​ನ ಸಹಾಯದಿಂದ ಎ ರಕ್ತ ಕಣವನ್ನ ಯೂನಿವರ್ಸಲ್​ ಡೋನರ್​​ ಆಗಿ ಮಾಡಿದ್ದಾರೆ. ಮೇರಿಲ್ಯಾಂಡ್​​ನಲ್ಲಿರುವ ನ್ಯಾಷನಲ್​​ ಇನ್​ಸ್ಟಿಟ್ಯೂಟ್​ ಆಫ್​​ ಹೆಲ್ತ್​​​ ಕ್ಲಿನಿಕಲ್​ ಸೆಂಟರ್​​ನ ಬ್ಲಡ್​​ ಟ್ರಾನ್ಸ್​ಫ್ಯೂಶನ್​​​ ಎಕ್ಸ್​​ಪರ್ಟ್​ ಹಾರ್ವೆ ಕ್ಲೇನ್​ ಈ ಬಗ್ಗೆ ಮಾಹಿತಿ ನೀಡಿದ್ದು ಈ ತರಹದ ಸಂಶೋಧನೆಯನ್ನ ಇದೇ ಮೊದಲ ಬಾರಿಗೆ ಮಾಡಲಾಗಿದೆ. ಹಾಗೂ ಈ ಅನ್ವೇಷಣೆ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಸಾಧಿಸಿದ್ರೆ ವೈದ್ಯಕೀಯ ಕ್ಷೇತ್ರಕ್ಕೆ ಬಹುದೊಡ್ಡ ಲಾಭವಾಗಲಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...