ಜಾಲತಾಣ ಹಾಗೂ ವಿಡಿಯೋ ಗೇಮ್ ಗಳ ದುಷ್ಪರಿಣಾಮಗಳ ಬಗ್ಗೆ 1950 ರಲ್ಲೇ ವಿಜ್ಞಾನ ಬರಹಗಾರರು ಎಚ್ಚರಿಕೆ ನೀಡಿದರೂ ಅಮೆರಿಕ ಮಾತ್ರ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ.
ಮುಂದೊಂದು ದಿನ ಜಾಲತಾಣಗಳು ಕೋಟ್ಯಂತರ ಜನರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತದೆ ಎಂಬ ಮುನ್ಸೂಚನೆಯನ್ನು ಫ್ರೆಡರಿಕ್ ಪೋಹಲ್ ಅವರು 1950 ರಲ್ಲೇ ಕೊಟ್ಟಿದ್ದರು.
ಆಧುನಿಕ ದಿನಗಳು ಸೃಷ್ಟಿಯಾಗುತ್ತವೆ. ಆದರೆ, ಜನರು ರೋಬೋಟ್ ಗಳಂತೆ ಜಾಲತಾಣಗಳಲ್ಲಿಯೇ ಮುಳುಗಿಬಿಡುತ್ತಾರೆ. ಅದರಲ್ಲೂ ಜಾಹೀರಾತುಗಳು ಮಾರುಕಟ್ಟೆ ಸೃಷ್ಟಿಸಿ ಗ್ರಾಹಕರನ್ನು ಆಳುತ್ತವೆ ಎಂದಿದ್ದರು.
ಆಧುನಿಕ ಮತ್ತು ತಂತ್ರಜ್ಞಾನಗಳ ಪರಿಣಾಮದ ಕುರಿತು ಭವಿಷ್ಯದ ಸಾಧ್ಯತೆಗಳನ್ನು ಪೋಹಲ್ ತಿಳಿಸಿದ್ದರು. ಅದೆಲ್ಲವೂ ಈಗ ಸತ್ಯವಾಗುತ್ತಿದೆ. ವಿಜ್ಞಾನ ಬರಹಗಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಲ್ಯಾನ್ ಕಾಸ್ಟರ್ ವಿವಿಯ ಡಾ.ಮೈಕ್ ರೈಡರ್ ಅಭಿಪ್ರಾಯಪಟ್ಟಿದ್ದಾರೆ.