
ಶಾಲಾ ಶಿಕ್ಷಕರೊಬ್ಬರು ಆನ್‌ಲೈನ್ ತರಗತಿ ಮುಗಿದ ಬಳಿಕ ಜೂಮ್ ಕಾಲ್ ಕಟ್ ಮಾಡದೇ ಅವಾಂತರ ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದಾರೆ.
ಕ್ಯಾಲಿಫೋರ್ನಿಯಾದ ಶಿಕ್ಷಕಿ ಕಿಂಬರ್ಲಿ ನ್ಯೂಮನ್ ತತನ್ನ ವಿದ್ಯಾರ್ಥಿಗಳ ಪೈಕಿ ಒಬ್ಬರೊಂದಿಗೆ ಜೂಮ್ ಕರೆಯಲ್ಲಿದ್ದರು. ಆದರೆ ಒಮ್ಮೆ ಸಂಭಾಷಣೆ ಮುಗಿದ ನಂತರ, ಕರೆಯನ್ನು ಕಟ್ ಮಾಡಲು ಮರೆತು ಹೋದರು.
ಈ ವೇಳೆ ಆ ಶಿಕ್ಷಕರು ಜನಾಂಗೀಯ ನಿಂದನೆಯಾಗುವಂತಹ ಮಾತನ್ನಾಡಿದ್ದು ಅದು ವಿದ್ಯಾರ್ಥಿ ಮನೆಯವರ ಗಮನಕ್ಕೆ ಬಂದಿದ್ದು, ತೀವ್ರ ಕೋಪಗೊಂಡಿದ್ದಾರೆ.
ಇಂದಿನಿಂದ ಹೊಸ ಆರ್ಥಿಕ ವರ್ಷ ಶುರು, ಪರಿಣಾಮ ಬೀರುವ ಹಲವು ಬದಲಾವಣೆ ಬಗ್ಗೆ ಇಲ್ಲಿದೆ ಮಾಹಿತಿ
ಆರನೇ ತರಗತಿಯ ತನ್ನ ಮಗ ಆನ್ ಲೈನ್ ಕಲಿಕೆಗೆ ಹೆಣಗಾಡಿದ ನಂತರ ಪೋಷಕರು ಶಿಕ್ಷಕರೊಂದಿಗೆ ಕರೆ ಮಾಡಲು ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿಯ ತಾಯಿ ಕತ್ರಾ ಸ್ಟೋಕ್ಸ್ 30 ನಿಮಿಷಗಳ ತರಗತಿಯನ್ನು ರೆಕಾರ್ಡ್ ಮಾಡಿದ್ದಾರೆ.
ವಿವಾದ ತೀವ್ರಗೊಂಡು ಆ ಶಿಕ್ಷಕಿ ಸೇವೆಯಿಂದಲೇ ಅಮಾನತುಗೊಂಡರೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈ ಹಿಂದೆ ಕೆಲವು ಪ್ರಕರಣದಲ್ಲಿ ಅನ್ ಲೈನ್ ಸಭೆ ವೇಳೆ ಅನೇಕ ಅವಘಡಗಳಾಗಿ ಸುದ್ದಿಯಾಗಿದ್ದವು. ಇದು ವಿವಾದಕ್ಕೆ ತಿರುಗಿತ್ತು.