ಗ್ವಾಟೆಮಾಲಾ: ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದು, ಶಿಕ್ಷಕರೊಬ್ಬರು ಮಕ್ಕಳಿಗೆ ಕಲಿಸಲು ವಿಭಿನ್ನ ವಿಧಾನ ಕಂಡುಕೊಂಡಿದ್ದಾರೆ.
ಗೆರಾರ್ಡೊ ಇಕ್ಸೊಯ್ ಎಂಬ 27 ವರ್ಷದ ಶಿಕ್ಷಕ ಸೈಕಲ್ ಕ್ಲಾಸ್ ರೂಂ ಪ್ರಾರಂಭಿಸಿದ್ದು, ತನ್ನ 6ನೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಮನೆಗಳಿಗೆ ವಾರಕ್ಕೆ ಎರಡು ದಿನ ತೆರಳಿ ಪಾಠವನ್ನು ಹೇಳಿಕೊಡುತ್ತಿದ್ದಾರೆ.
ಮಾರ್ಚ್ ನಲ್ಲಿ ಲಾಕ್‌ಡೌನ್ ಆದ ನಂತರ ಅವರು ತಮ್ಮ ಉಳಿತಾಯದಲ್ಲಿ ಮೂರು ಗಾಲಿ ಸೈಕಲ್ ಕೊಂಡು ಅದಕ್ಕೆ ಒಂದು ಪ್ಲಾಸ್ಟಿಕ್ ಶೀಟ್ ಹೊದಿಸಿದ್ದಾರೆ. ಒಂದು ಬಿಳಿ ಬೋರ್ಡ್ ಕೂರಿಸಿದ್ದಾರೆ. ಆಡಿಯೋ ಕೇಳಿಸುವ ಸಲುವಾಗಿ ಒಂದು ಸಣ್ಣ ಸೋಲಾರ್ ಪ್ಯಾನಲ್ ಕೂರಿಸಿದ್ದಾರೆ.
“ನಾನು ಮೊದಲು ಆನ್ ಲೈನ್ ಪಾಠ ಮಾಡಲು ಯತ್ನಿಸಿದೆ. ಆದರೆ, ಅದು ಪ್ರಯೋಜನವಾಗಲಿಲ್ಲ. ವಾಟ್ಸಾಪ್ ಗೆ ವಿಡಿಯೋ ಕಳಿಸಿದರೂ ಪಾಲಕರು ಮಕ್ಕಳಿಗೆ ಡೌನ್ಲೋಡ್ ಮಾಡಿಕೊಡುವುದಿಲ್ಲ.
ಇಲ್ಲಿ ಶೇ.42ರಷ್ಟು ಜನ ಅನಕ್ಷರಸ್ಥರಿದ್ದಾರೆ. ಶೇ.13ರಷ್ಟು ಮನೆಗಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕವಿದೆ. ಇದರಿಂದ ಈ ಯೋಜನೆ ಅನಿವಾರ್ಯವಾಯಿತು ಎಂಬುದು ಶಿಕ್ಷಕ ಇಕ್ಸೊಯ್ ಅವರ ಅಭಿಪ್ರಾಯ.