ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಯು ಗಿನ್ನಿಸ್ ಪುಟ ಸೇರಿದೆ.
ಇಲ್ಲಿನ ಬ್ರಿಟಿಷ್ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳು 3,23,103 ಪ್ಲಾಸ್ಟಿಕ್ ಬಾಟಲಿಯ ಮುಚ್ಚಳಗಳನ್ನು ಬಳಸಿ 8,984.6 ಅಡಿ ಉದ್ದದ ಸರಪಳಿ ನಿರ್ಮಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.
ಈ ಹಿಂದೆ ನೆದರ್ ಲ್ಯಾಂಡ್ ನಲ್ಲಿ 2,60,866 ಮುಚ್ಚಳಗಳನ್ನು ಬಳಸಿ ಸರಪಳಿ ನಿರ್ಮಿಸಲಾಗಿತ್ತು.
ಪರಿಸರ ಜಾಗೃತಿ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ, ಸಮುದ್ರದ ಮೇಲಾಗುತ್ತಿರುವ ಒತ್ತಡ ಇತ್ಯಾದಿಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಇಷ್ಟು ದೊಡ್ಡ ಪ್ರಮಾಣದ ಸರಪಳಿ ರಚಿಸಿದ್ದು, ಇದಕ್ಕಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ಬಾಟಲಿ ಮತ್ತು ಮುಚ್ಚಳಗಳನ್ನು ಮರು ಬಳಕೆ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ.