ನಾವೆಲ್ ಕೊರೋನಾ ವೈರಸ್ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಜನಸಾಮಾನ್ಯರ ದಿನನಿತ್ಯದ ಅತ್ಯಗತ್ಯ ವಸ್ತುಗಳಲ್ಲಿ ಮಾಸ್ಕ್‌ಗಳೂ ಸಹ ಸೇರಿಕೊಂಡಿವೆ. ಇದೀಗ ಈ ಮಾಸ್ಕ್‌ಗಳಲ್ಲೇ ಥರಾವರಿ ವಿನ್ಯಾಸಗಳು ಬಂದಿದ್ದು, ಅವೂ ಸಹ ಫ್ಯಾಶನಬಲ್ ಆಗಿಬಿಟ್ಟಿವೆ.
ಫಿಲಿಪ್ಪೀನ್ಸ್‌ನ ಸ್ಪೆಷಲ್ ಎಫೆಕ್ಟ್ ಕಲಾವಿದ ರೆನೆ ಅಬೆಲಾರ್ಡೋ ಹಾರರ್ ಮೂವಿಗಳಿಂದ ಬಹಳ ಪೇಮಸ್ ಆದವರು. ಅವರೀಗ ತಮ್ಮ ಕೌಶಲ್ಯಗಳನ್ನು ಮಾಸ್ಕ್‌ಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.
ದೆವ್ವಗಳು, ಭೂತದ ಮುಖಗಳಂತೆ ಕಾಣುವ ಮಾಸ್ಕ್‌ಗಳನ್ನು ವಿನ್ಯಾಸಗೊಳಿಸಿರುವ ರೆನೆ, ಮೊದಲಿಗೆ ತಮ್ಮ ಮಾಸ್ಕನ್ನು ತಾವೇ ತೊಟ್ಟು, ಮಗಳಿಂದ ಒಂದು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಚಿತ್ರ ವೈರಲ್ ಆಗಿದ್ದು, ಈ ಮಾಸ್ಕ್‌ಗಳಿಗೆ ಬಲೇ ಡಿಮ್ಯಾಂಡ್ ಶುರು ಆಗಿದೆ. ಪ್ರತಿಯೊಂದು ಮಾಸ್ಕ್‌ಗೂ 400-700 ರೂ.ಗಳಷ್ಟು ಚಾರ್ಜ್ ಇದ್ದು, ಅಬೆಲಾರ್ಡೋಗೆ ದಿನಾ ನೂರಾರು ಆರ್ಡರ್‌ಗಳು ಬರುತ್ತಿವೆ.