alex Certify ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು ಇದೆ ಎಂದು ಗಿನ್ನಿಸ್‌ ಸಂಸ್ಥೆ ದೃಢಪಡಿಸಿದೆ.

ಪ್ರಸಿದ್ಧ ಝೂ ಕೀಪರ್‌ ಆಗಿದ್ದ ದಿವಂಗತ ಸ್ಟೀವ್‌ ಇರ್ವಿನ್‌ ಪುತ್ರಿ ಬಿಂದಿ ಇರ್ವಿನ್‌ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇರ್ವಿನ್‌ ಕುಟುಂಬ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆಸುತ್ತಿರುವ ಆಸ್ಟ್ರೇಲಿಯನ್‌ ಝೂನಲ್ಲಿ ಈ ಜಿರಾಫೆಯಿದೆ. ʼಫಾರೆಸ್ಟ್ʼ‌ ಹೆಸರಿನ ಈ ಜಿರಾಫೆ ನ್ಯೂಜಿಲ್ಯಾಂಡ್‌ನಲ್ಲಿ 2007ರಲ್ಲಿ ಜನಿಸಿತ್ತು. ಎರಡು ವರ್ಷದ ಬಳಿಕ ಈ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಯಿತು ಎಂದು ಹೇಳಲಾಗಿದೆ.

ಇರ್ವಿನ್‌ ಕುಟುಂಬದ ಈ ಪ್ರಾಣಿ ಸಂಗ್ರಹಾಲಯಕ್ಕೆ ಪ್ರತಿವರ್ಷ ಏಳು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಜಿರಾಫೆ‌ ವಿಷಯವನ್ನು ಇನ್ಟ್ಸಾಗ್ರಾಂನಲ್ಲಿ ಫೋಟೋ ಸಮೇತ ಹಾಕಿದ್ದಾರೆ. ವಿಶ್ವದ ಅತಿದೊಡ್ಡ ಜಿರಾಫೆಯನ್ನು ಮುಂದಿನ ದಿನದಲ್ಲಿ ಆಸ್ಟ್ರೇಲಿಯನ್‌ ಝೂನಲ್ಲಿ ಭೇಟಿ ಮಾಡಬಹುದು ಎಂದಿದ್ದಾರೆ. ಇದೀಗ ಈ ಪೋಸ್ಟ್‌ ಭಾರಿ ವೈರಲ್‌ ಆಗಿದ್ದು, 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳ ಜೊತೆಗೆ ಸಾವಿರಾರು ಮಂದಿ ಕಾಮೆಂಟ್‌ ಮಾಡಿದ್ದಾರೆ.

https://www.instagram.com/p/CDMuji0haBQ/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...