ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಫೋಟೋವನ್ನ ನೋಡಲೇಬೇಕು.
ಎತ್ತರದ ಎಲಿವೇಟರ್ ಮೇಲೆ ಸಂಚರಿಸುತ್ತಿದ್ದ ರೈಲು ಆಯತಪ್ಪಿ ಹಳಿಯ ತುತ್ತ ತುದಿಗೆ ಹೋಗಿಬಿಟ್ಟಿದೆ. ಇನ್ನೇನು ರೈಲು ನೆಲಕ್ಕೆ ಬಿದ್ದೇ ಬಿಡ್ತು ಅಂತಾ ಆತಂಕಕ್ಕೆ ಒಳಗಾಗೋವಷ್ಟರಲ್ಲಿ ಅಲ್ಲೇ ಇದ್ದ ತಿಮಿಂಗಲದ ಬಾಲದ ಪ್ರತಿಮೆ ಬಳಿ ರೈಲು ಸ್ಟಾಪ್ ಆಗಿದೆ .
ಅಂದಹಾಗೆ ಈ ರೈಲಿನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಆದರೆ ನಿರ್ವಾಹಕ ಮಾತ್ರ ರೈಲು ಬಿದ್ದೇ ಬಿಡ್ತು ಅಂತಾ ಆತಂಕಕ್ಕೆ ಒಳಗಾಗಿದ್ರು ಎನ್ನಲಾಗಿದೆ. ತಿಮಿಂಗಲದ ಬಾಲದಿಂದ ರಕ್ಷಣೆ ಸಿಗ್ತು ಎಂಬ ಶೀರ್ಷಿಕೆಯಡಿಯಲ್ಲಿ ಈ ಫೋಟೋ ವೈರಲ್ ಆಗ್ತಿದೆ.
ಅಂದಹಾಗೆ ಇಂತಹ ತುರ್ತು ಪರಿಸ್ಥಿತಿಗೆ ಅಂತಾ ತಿಮಿಂಗಲದ ಬಾಲದ ಕಲಾಕೃತಿಯನ್ನ ನಿರ್ಮಿಸಿರಲಿಲ್ಲ. ರೈಲಿನ ತೂಕವನ್ನ ಈ ಪ್ರತಿಮೆ ತಡೆದುಕೊಂಡಿದೆ ಅಂದರೆ ಅದು ಅದೃಷ್ಟವೇ ಸರಿ ಅಂತಾ ಕಲಾವಿದ ಮಾರ್ಟನ್ ಸ್ಟ್ರೂಯಿಜ್ ಹೇಳಿದ್ದಾರೆ.