ಮೀನಿನ ಮೇಲೆ, ಹಾರುವ ಹಕ್ಕಿಗಳ ಮೇಲೆ ಸವಾರಿ ಮಾಡುವುದನ್ನು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ 2020 ರಲ್ಲಿ ಏನು ಬೇಕಾದರೂ ಸಾಧ್ಯವಾಗುತ್ತಿದೆ.
ಸ್ಟಂಟ್ ಮ್ಯಾನ್ ಒಬ್ಬರು ಬೃಹತ್ ಶಾರ್ಕ್ ತಿಮಿಂಗಿಲದ ಮೇಲೆ ಜಿಗಿದು ಅದರ ಮೇಲೆ ಸವಾರಿ ಮಾಡಿದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಅದರ ವಿಡಿಯೋ ಫುಲ್ ವೈರಲ್ ಆಗಿದೆ.
ಸೌದಿಯ ಬಂದರು ನಗರ ಯಾನ್ಬುದ ಜಾಕಿ-ಅಲ್-ಸಬಹಾಯ್ ಈ ಸಾಹಸ ಮಾಡಿದ ವ್ಯಕ್ತಿ. ತಮ್ಮ ಇಬ್ಬರು ಸ್ನೇಹಿತರ ಜತೆ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದ ಅವರು, ದೋಣಿಯ ಸಮೀಪ ನೀರಿನ ಮೇಲೆ ಬಂದ ಸುಮಾರು 20 ಅಡಿಗೂ ಅಧಿಕ ಉದ್ದದ ಶಾರ್ಕ್ ಮೇಲೆ ಜಿಗಿದು ಸುಮಾರು 50 ಅಡಿ ದೂರದವರೆಗೂ ಸಾಗುವ ವಿಡಿಯೋ ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದೆ.
ವಿಶೇಷ ಎಂದರೆ ಸೌದಿ ಕೆಂಪು ಸಾಗರದಲ್ಲಿ ಶಾರ್ಕ್ ಗಳು ಕಾಣಿಸುವುದು ಅತಿ ಅಪರೂಪವಾಗಿದೆ. “ವನ್ಯಜೀವಿಗೆ ಕಿರುಕುಳ ಕೊಟ್ಟ ಆತನನ್ನು ಬಂಧಿಸಬೇಕು” ಎಂದು ಒಬ್ಬರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು “ಆತನನ್ನು ದೇವರೇ ಕಾಪಾಡಬೇಕು” ಎಂದಿದ್ದಾರೆ.