alex Certify ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಮಹತ್ವದ ಬದಲಾವಣೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್​ ಹಾಗೂ ಮಯನ್ಮಾರ್​​ ದೇಶದ ಮಹಿಳೆಯರನ್ನ ಮದುವೆಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಅನಧಿಕೃತ ಅಂಕಿ – ಅಂಶಗಳು ನೀಡಿರುವ ಮಾಹಿತಿಯ ಪ್ರಕಾರ ಈ ನಾಲ್ಕು ದೇಶಗಳ ಸುಮಾರು 5 ಲಕ್ಷ ಮಹಿಳೆಯರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾರೆ.

ವಿದೇಶಿ ಮಹಿಳೆಯರನ್ನ ವಿವಾಹವಾಗಬೇಕೆಂದು ಬಯಸಿದ್ದ ಸೌದಿ ಅರೇಬಿಯಾದ ಪುರುಷರಿಗೆ ಈ ಆದೇಶ ಸಂಕಷ್ಟ ತಂದಿದೆ. ಇನ್ಮುಂದೆ ವಿದೇಶಿ ಮಹಿಳೆಯರನ್ನ ಮದುವೆಯಾಗಬೇಕು ಅಂದರೆ ಸೌದಿ ಅರೇಬಿಯಾದ ಪುರುಷರು ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮೆಕ್ಕಾ ಅಧಿಕಾರಿ ಖುರೇಷಿ, ವಿಚ್ಚೇದನ ಪಡೆದ ಪುರುಷರು ಆರು ತಿಂಗಳ ಒಳಗಾಗಿ ಸರ್ಕಾರಕ್ಕೆ ಈ ಬಗ್ಗೆ ಅರ್ಜಿ ಹಾಕುವಂತಿಲ್ಲ ಎಂದು ಹೇಳಿದ್ರು. 25 ವರ್ಷ ಮೇಲ್ಪಟ್ಟ ಪುರುಷರು ತಮ್ಮ ಐಡಿ ಕಾರ್ಡ್​ಗಳ ಸಮೇತ ಅರ್ಜಿಯನ್ನ ಮೇಯರ್​​ಗೆ ಸಲ್ಲಿಕೆ ಮಾಡಬೇಕು. ಇದರ ಜೊತೆಯಲ್ಲಿ ಕುಟುಂಬಸ್ಥರ ವಿವರವನ್ನೂ ಲಗತ್ತಿಸಬೇಕು ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...