
ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯದು. ಯೋಗ ಮಾಡುವುದ್ರಿಂದ ದೇಹ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನ ಶೈಲಿಗೆ ಯೋಗ ಒಳ್ಳೆಯದು.
ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಯೋಗವನ್ನು ಅಳವಡಿಸಿಕೊಳ್ಳಲಾಗಿದೆ. ತಪಸ್ವಿಗಳು ಪ್ರಾಚೀನ ಕಾಲದಲ್ಲಿ ಯೋಗವನ್ನು ಮಾಡುತ್ತಿದ್ದರು. ಇದನ್ನು ವೇದಗಳಲ್ಲಿಯೂ ಬರೆಯಲಾಗಿದೆ. ಆದ್ರೆ ಇಲ್ಲಿ ಯೋಗ ಮಾಡುವ ಮೊದಲು ಗಾಂಜಾ ಸೇವನೆ ಮಾಡಲಾಗುತ್ತದೆ.
ಯಸ್, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಯುವಕರು ಯೋಗ ಮಾಡುವ ಮೊದಲು ಗಾಂಜಾ ಸೇವಿಸುತ್ತಾರೆ. ತರಗತಿಯ ಎಲ್ಲ ವಿದ್ಯಾರ್ಥಿಗಳು ಗಾಂಜಾ ಸೇವನೆಯ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಮಾಡುವುದು ಕಡ್ಡಾಯ. ಇಲ್ಲಿ ಯೋಗ ತರಗತಿ ನಡೆಸುತ್ತಿರುವ ಯೋಗ ಗುರು ಡಿ ಡುಸಾಲ್ಟ್, ಅವರು 2012 ರಲ್ಲಿ ಈ ತರಗತಿಯನ್ನು ಪ್ರಾರಂಭಿಸಿದರು. ಈಗ ಅದು ಜನಪ್ರಿಯವಾಗಿದೆ. ವೆಬ್‌ಸೈಟ್‌ನ ಪ್ರಕಾರ, ಯೋಗವನ್ನು ಪ್ರಾರಂಭಿಸುವ ಅರ್ಧ ಗಂಟೆಯ ಮೊದಲು ಗಾಂಜಾ ತಿನ್ನುತ್ತೇವೆ ಎಂದು ಡುಸಾಲ್ಟ್ ಹೇಳುತ್ತಾರೆ.
ಈ ತರಗತಿಗೆ ಶುರುವಾಗುವ ಅರ್ಧಗಂಟೆ ಮೊದಲು ಜನರು ಸುತ್ತಮುತ್ತಲಿನ ವಾತಾವರಣದೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಾರೆ. ನಂತರ ಯೋಗ ಶುರು ಮಾಡುತ್ತಾರೆ.