ರೋಮ್ ಫರ್ಡ್: ಖಾಲಿ ಹೊಟ್ಟೆ, ಖಾಲಿ ಕೈ ಎಂಥ ಕೌಶಲ್ಯವನ್ನೂ ಕಲಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಲಾಕ್ ಡೌನ್ ಕೂಡ ಹಾಗೆ. ಕೆಲವರಿಗೆ ಹೊಸ ದುಡಿಮೆಯ ಮಾರ್ಗ ಹುಡುಕಿಕೊಟ್ಟಿದೆ.
ಯುನೈಟೆಡ್ ಕಿಂಗ್ಡಮ್ ನ ರೋಮ್ ಫರ್ಡ್ ನ ಬೆನ್ ಗಲೀವರ್ ಸ್ವಂತ ಸಲೂನ್ ನಡೆಸುತ್ತಿದ್ದರು. ದಿನಕ್ಕೆ ಸಾವಿರ ಫೌಂಡ್ ದುಡಿಯುವುದೂ ಕಷ್ಟವಾಗಿತ್ತು. ಲಾಕ್ ಡೌನ್ ನಂತರ ಅದೂ ನಿಂತು ಹೋಗಿತ್ತು. ಜೀವನ ನಿರ್ವಹಣೆಗಾಗಿ ಅವರು ಹಲ್ಲು ಸ್ವಚ್ಛ ಮಾಡುವ ಸಾಧನವೊಂದರ ಮಾರಾಟ ಪ್ರಾರಂಭಿಸಿದರು.
ಚೀನಾ ಮೂಲದ ಉದ್ಯಮಿಯೊಬ್ಬರಿಂದ ಐದಂಕಿಗೆ ಹಲ್ಲು ಸ್ವಚ್ಛ ಮಾಡುವ ಉದ್ಯಮ ಖರೀದಿಸಿದ್ದರು. ನಂತರ ಅದನ್ನು ಅಮೆರಿಕಾ ವ್ಯಕ್ತಿಗೆ ಮಾರಿ ಆನ್ ಲೈನ್ ನಲ್ಲಿ ಕೂದಲು ಮಾರಾಟ ವ್ಯವಹಾರ ಪ್ರಾರಂಭಿಸಿದ್ದಾರೆ.
ಕೊರೊನಾ ಲಸಿಕೆ ಪಡೆದವರಿಗೆ ಹೋಟೆಲ್ ಬಿಲ್ನಲ್ಲಿ ಸಿಗುತ್ತೆ ರಿಯಾಯಿತಿ..!
“ನಾನು ಈ ಉದ್ಯಮದಿಂದ ಸಂತೃಪ್ತನಾಗಿದ್ದೇನೆ. ದಿನಕ್ಕೆ 12 ಸಾವಿರ ಪೌಂಡ್ ಗಳಿಸುತ್ತೇನೆ” ಎಂದು ಗಲೀವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.