ಟೊರಾಂಟೋ: ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿರುವ ಸಲೂನ್ ಒಂದು ಲಾಕ್ ಡೌನ್ ನಂತರ ಮರು ತೆರೆದಿದ್ದು ಈಗ ಸ್ಟುಡಿಯೋ ಆಗಿ ಮಾರ್ಪಟ್ಟಿದೆ. ಇಲ್ಲಿ ಸಾಮಾನ್ಯ ಹೇರ್ ಕಟ್ಟಿಂಗ್ ಇಲ್ಲ. ಬದಲಿಗೆ ಚಿತ್ರೀಕರಣಕ್ಕಾಗಿ ಮಾತ್ರ ಶೇವಿಂಗ್, ಹೇರ್ ಕಟ್ಟಿಂಗ್ ಮಾಡಲಾಗುವುದು.
ಸೇಂಟ್ ಕ್ಯಾಥರಿನ್ಸ್ ನ ಕಲಾತ್ಮಕ ಕ್ಷೌರಿಕ ಅಲೈಕಾ ಹಿರ್ಟರ್ ಈ ಹೊಸ ವಿಧಾನ ಕಂಡು ಹಿಡಿದಿದ್ದಾರೆ. ಸಲೂನ್ ನಲ್ಲಿ ಕ್ಯಾಮರಾ ಹಾಗೂ ಲೈಟ್ ಅಳವಡಿಸಿದ್ದಾರೆ. ಸಿನೆಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕೆ ಇಲ್ಲಿ ಅವಕಾಶ ಮಾಡಿಕೊಡಲಾಗುವುದು. ಸಾಮಾನ್ಯ ಹೇರ್ ಕಟ್ಟಿಂಗ್ ಮಾಡುವುದಿಲ್ಲ ಎಂದಿದ್ದಾರೆ.
ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!
ಹಿರಿಯರಿಗೆ ಹಾಗೂ ಮಕ್ಕಳಿಗೆ ಆಡಿಶನ್ ರೀತಿಯಲ್ಲಿ ಹೇರ್ ಕಟ್ ಮಾಡಲಾಗುವುದು ಅದರ ವಿಡಿಯೋವನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಸಲೂನ್ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.