ಮಾನವೀಯ ಪೋಸ್ಟ್ ಒಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಯುವತಿಯೊಬ್ಬರ ಮೃತ ತಾಯಿಯ ಆಡಿಯೋ ರೆಕಾರ್ಡ್ ಹೊಂದಿದ್ದ ಟೆಡ್ಡಿ ಬೇರ್ ಕಳ್ಳತನವಾಗಿದ್ದು, ಅದನ್ನು ವಾಪಸ್ ನೀಡಿ ಎಂದು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ಆಕೆಯ ಪೋಸ್ಟ್ ಕಾಡ್ಗಿಚ್ಚಿನಂತೆ ಹರಡಿದೆ.
24 ವರ್ಷದ ಮೆರಾ ಸೊರಿಯಾನೋ ಎಂಬುವವರು ಜು. 24 ರಂದು ಮನೆ ಬದಲಾಯಿಸುವ ಸಂದರ್ಭದಲ್ಲಿ ಆಕೆಯ ಪೌರತ್ವ ಪ್ರಮಾಣಪತ್ರ, ಬ್ಲ್ಯಾಂಕ್ ಚೆಕ್ ಗಳು, ಸಾಮಾಜಿಕ ವಿಮೆ, ಫೈನಾನ್ಸ್, ಪಾಸ್ಪೋರ್ಟ್ ಇತ್ಯಾದಿಗಳು ಕಳುವಾಗಿವೆ. ಆದರೆ, ಆಕೆ ಅದ್ಯಾವುದರ ಬಗ್ಗೆಯೂ ಮಹತ್ವ ನೀಡಿಲ್ಲ. ತನ್ನ ತಾಯಿ ಕಳೆದ ವರ್ಷ ಕ್ಯಾನ್ಸರ್ ನಿಂದ ನಿಧನ ಹೊಂದಿದರು. ಆಕೆಯ ಕೊನೆಯ ಸಂದೇಶ ಟೆಡ್ಡಿ ಬೇರ್ ನಲ್ಲಿ ರೆಕಾರ್ಡ್ ಆಗಿತ್ತು ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಮೆರಾ ಅವರ ಟೆಡ್ಡಿ ಬೇರ್ ಒದಗಿಸಿದವರಿಗೆ ಯಾವುದೇ ಪ್ರಶ್ನೆ ಕೇಳದೇ 5 ಸಾವಿರ ಡಾಲರ್ ಬಹುಮಾನ ನೀಡಲಾಗುವುದು ಎಂದು ಪ್ರಸಿದ್ಧ ಚಿತ್ರನಟ ರಯನ್ ರೆನಾಲ್ಡ್ಸ್ ಟ್ವೀಟ್ ಮಾಡಿದ್ದಾರೆ. ಟೆಡ್ಡಿ ಬೇರ್ ಸಿಕ್ಕಿದರೆ Goble@cbc.ca ಈ ವಿಳಾಸಕ್ಕೆ ಇ ಮೇಲ್ ಮೂಲಕ ಮಾಹಿತಿ ಮಾಡುವಂತೆ ಡೆಬ್ರಾ ಗೋಬಲ್ ಸಂಸ್ಥೆ ಟ್ವೀಟ್ ಮಾಡಿದೆ.