ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆ ರುತ್ ಬಾದೆರ್ ಗಿನ್ಸ್‌ಬರ್ಗ್ ಅನಾರೋಗ್ಯದ ಸಮಸ್ಯೆಯಿಂದ ಇದೇ ಸೆಪ್ಟೆಂಬರ್ 18ರಂದು ಕೊನೆಯುಸಿರೆಳೆದಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ಇಡೀ ಜಗತ್ತೇ ಸಂತಾಪ ವ್ಯಕ್ತಪಡಿಸಿದೆ.
ಅಮೆರಿಕ ರಾಜಧಾನಿಯಲ್ಲಿ ಅಗಲಿದ ನ್ಯಾಯಾಧೀಶೆಗೆ ಅಂತಿಮ ಗೌರವ ಸಲ್ಲಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಬಹಳಷ್ಟು ಗಣ್ಯಾತಿಗಣ್ಯರು ಸೇರಿಕೊಂಡಿದ್ದರು. ಇದೇ ವೇಳೆ ಗಿನ್ಸ್‌ಬರ್ಗ್ ಅವರ ವೈಯಕ್ತಿಕ ಫಿಟ್ನೆಸ್ ತರಬೇತುದಾರ ಬ್ರಯಾಂಟ್ ಜಾನ್ಸನ್ ತಮ್ಮದೇ ಶೈಲಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೂಟ್ ಧರಿಸಿ, ಕೊರೋನಾ ಮಾಸ್ಕ್ ಧರಿಸಿದ್ದ ಬ್ರಯಾಂಟ್, ಗಿನ್ಸ್‌ಬೆರ್ಗ್ ಇದ್ದ ಶವಪೆಟ್ಟಿಗೆ ಮುಂದೆ ಮೂರು ಪುಶ್ ಅಪ್ ಮಾಡಿ ಅಗಲಿದ ಜೀವಕ್ಕೆ ಭಾವಪೂರ್ಣವಾದ ಅಂತಿಮ ಗೌರವ ಸಲ್ಲಿದ್ದಾರೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.