ಮಾಸ್ಕೊ: ರಷ್ಯಾದ ಯೂಟ್ಯೂಬರ್ ಒಬ್ಬ ಕೋಕಾಕೋಲಾಕ್ಕೆ ಸೋಡಾ ಬೆರೆಸಿ ಪ್ರಯೋಗ ಮಾಡಿದ ಯೂಟ್ಯೂಬ್ ವಿಡಿಯೋ ಐದು ದಿನದಲ್ಲಿ ಏಳು ಮಿಲಿಯನ್ ವೀಕ್ಷಣೆ ಪಡೆದಿದೆ. ಎರಡನ್ನೂ ಸೇರಿಸಿದಾಗ ದೊಡ್ಡ ಸ್ಫೋಟವೇ ಸಂಭವಿಸಿದೆ.
ರಷ್ಯಾದ ಯೂಟ್ಯೂಬರ್ ಮ್ಯಾಕ್ಸಿನ್ ಮೊನಕೋವ್ 10 ಸಾವಿರ ಲೀಟರ್ ಕೋಕಾ ಕೋಲಾವನ್ನು ಒಂದು ಟ್ಯಾಂಕ್ ನಲ್ಲಿ ಸಂಗ್ರಹಿಸುತ್ತಾರೆ. ಅದಕ್ಕೆ ಮತ್ತೊಂದು ಟ್ಯೂಬ್ ಮೂಲಕ ಸೋಡಾ ಸುರಿಯುತ್ತಾರೆ. ಕೆಲವೇ ಕ್ಷಣದಲ್ಲಿ ಅದು ಸ್ಫೋಟವಾಗುತ್ತದೆ.
ಮ್ಯಾಕ್ಸಿನ್ ಇದಕ್ಕಾಗಿ 7 ಲಕ್ಷ ರುಬೆಲ್ ಖರ್ಚು ಮಾಡಿದ್ದಾರೆ. ನಾಲ್ಕು ವರ್ಷ ಕಾದು, ಹಣ ಸಂಗ್ರಹಿಸಿ ಮೈದಾನವೊಂದರಲ್ಲಿ ಈ ಪ್ರಯೋಗ ನಡೆಸಿದ್ದಾರೆ.
ಅಡುಗೆ ಸೋಡಾದಲ್ಲಿ ಕಾರ್ಬೋನೇಟ್ ಇದೆ. ಕೋಕಾ ಕೋಲಾದಲ್ಲಿ ಇರುವ ಆ್ಯಸಿಡ್ ಅದಕ್ಕೆ ಸೇರಿದಾಗ ಹೈಡ್ರೋಜನ್ ಕಾರ್ಬೋನೇಟ್ ಉತ್ಪತ್ತಿಯಾಗುತ್ತದೆ. ನೀರು ಹಾಗೂ ಕಾರ್ಬನ್ ಡೈಯಾಕ್ಸೈಡ್ ಬೇರಾಗುವ ಪ್ರಕ್ರಿಯೆ ಸಂದರ್ಭದಲ್ಲಿ ಸಿಒ2 ಸ್ಫೋಟಕ್ಕೆ ಕಾರಣವಾಗುತ್ತದೆ ಎಂಬುದನ್ನು ಮ್ಯಾಕ್ಸಿನ್ ವಿಡಿಯೋದಲ್ಲಿ ವಿವರಿಸಿದ್ದಾರೆ.