
ಕಳೆದ ತಿಂಗಳು ರಷ್ಯಾ ಅನುಮೋದಿಸಿದ ಕೋವಿಡ್-19 ಲಸಿಕೆ ಸ್ಪುಟ್ನಿಕ್ 5 ಮಾನವ ಪ್ರಯೋಗದಲ್ಲಿ ಯಾವುದೇ ಗಂಭೀರ ಪ್ರತಿಕೂಲ ನೋವುಂಟು ಮಾಡಿಲ್ಲ. ರಷ್ಯನ್ ಲಸಿಕೆ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ.
ಮಾನವ ಪ್ರಯೋಗಗಳಲ್ಲಿ ಪ್ರತಿಕಾಯದ ಪ್ರತಿಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ದಿ ಲ್ಯಾನಸ್ಟೆಟ್ ಜರ್ನಲ್ ನಲ್ಲಿ ಶುಕ್ರವಾರ ಪ್ರಕಟವಾದ ಪ್ರಾಥಮಿಕ ಫಲಿತಾಂಶಗಳಲ್ಲಿ ಮಾಹಿತಿ ನೀಡಲಾಗಿದೆ.
76 ಜನರಲ್ಲಿ ಆರಂಭಿಕ ಹಂತದ ಪ್ರಯೋಗ ಫಲಿತಾಂಶ ವಿವರದಲ್ಲಿ ಲಸಿಕೆ ಸುರಕ್ಷಿತವಾಗಿದೆ. 28 ದಿನಗಳಲ್ಲಿ ಲಸಿಕೆಗಳು ಪ್ರತಿಕ್ರಿಯೆ ಉಂಟು ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.