
ಮರಗಟ್ಟುವ ತಣ್ಣನೆಯ ನೀರಿನಲ್ಲಿ ಮುಳುಗೇಳುವ ಮೂಲಕ ಆರ್ಥಡಾಕ್ಸ್ ಕ್ರಿಶ್ಚಿಯನ್ ಹಬ್ಬವೊಂದಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚಾಲನೆ ನೀಡಿದ್ದಾರೆ.
ಕ್ರಮ್ಲಿನ್ ಪೂಲ್‌ನಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ -17 ಡಿಗ್ರಿ ತಾಪಮಾನದಲ್ಲೂ ಸಹ ಬರಿಮೈನಲ್ಲಿ ಸ್ನಾನ ಮಾಡುತ್ತಿರುವ ಪುಟಿನ್ ಈ ವಯಸ್ಸಿನಲ್ಲೂ ಸಹ ಸದೃಢ ಅಂಗಸೌಷ್ಠವ ಕಾಪಾಡಿಕೊಂಡಿರುವುದನ್ನು ಕಾಣಬಹುದಾಗಿದೆ. ನೀರಿನಲ್ಲಿ ಮೂರು ಬಾರಿ ಮುಳುಗೇಳಿದ ಪುಟಿನ್, ಅಲ್ಲಿಂದ ತರಾತುರಿಯಲ್ಲಿ ಹೊರಟಿದ್ದಾರೆ.
ಪುಟಿನ್ ಆರೋಗ್ಯದ ಬಗ್ಗೆ ಎದ್ದಿದ್ದ ಅನೇಕ ಊಹಾಪೋಹಗಳಿಗೆ ಈ ವಿಡಿಯೋ ತೆರೆ ಎಳೆದಿದೆ. ಈ ವರ್ಷದಲ್ಲಿ ಅಧ್ಯಕ್ಷ ಗಾದಿಗೆ ಗುಡ್‌ಬೈ ಹೇಳಲಿರುವ ಪುಟಿನ್, ತಮ್ಮ ಉತ್ತರಾಧಿಕಾರಿಯ ನೇಮಕ ಮಾಡಲಿದ್ದಾರೆ ಎಂದು ಅನೇಕ ವರದಿಗಳು ಪ್ರಕಟಗೊಂಡಿದ್ದವು.