alex Certify ನೆಚ್ಚಿನ ಆಹಾರ ಖರೀದಿಗಾಗಿ ಹೆಲಿಕಾಪ್ಟರ್ ನಲ್ಲಿ ತೆರಳಿದ ಸಿರಿವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಆಹಾರ ಖರೀದಿಗಾಗಿ ಹೆಲಿಕಾಪ್ಟರ್ ನಲ್ಲಿ ತೆರಳಿದ ಸಿರಿವಂತ

ಫಾಸ್ಟ್ ಫುಡ್​ ತಿನ್ನಬೇಕು ಅಂತಾ ಆಸೆಯಾದ್ರೆ ಸಾಕು. ಅದನ್ನ ಖರೀದಿ ಮಾಡೋಕೆ ನಾವು ಎಲ್ಲಿಗೆ ಬೇಕಿದ್ದರೂ ಹೋಗಿ ಬಿಡ್ತೀವಿ. ಅದರಲ್ಲೂ ಈ ವರ್ಷ ಮನೆಯಲ್ಲೇ ಕೂತು ಕೂತು ಬೋರಾದ ಜನರು ಫಾಸ್ಟ್​ ಫುಡ್​ಗಳ ಕಡೆ ವಿಶೇಷ ಆಸಕ್ತಿ ತೋರುತ್ತಿದ್ದಾರೆ.

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ 32 ಕಿಲೋಮೀಟರ್​ ದೂರ ಕ್ರಮಿಸಿ ಬಟರ್​ ಚಿಕನ್​ ಖರೀದಿ ಮಾಡಿದ್ದಾನೆ. ಲಾಕ್​ಡೌನ್​ ನಡುವೆಯೂ ಬ್ರೆಡ್​ ಖರೀದಿ ಮಾಡಬೇಕೆಂದು ಬಯಸಿದ ಬ್ರಿಟನ್​​ನ ವ್ಯಕ್ತಿ ಗಂಟೆಗೆ 177 ಕಿಲೋಮೀಟರ್​​ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ.

ಇವೆಲ್ಲ ಹಾಗಿರಲಿ ಮೆಕ್​​ಡೊನಾಲ್ಡ್​​ನಲ್ಲಿ ಬರ್ಗರ್​ ಹಾಗೂ ಫ್ರೆಂಚ್​ ಫ್ರೈಸ್​ ಖರೀದಿ ಮಾಡಬೇಕು ಎಂದು ಹೊರಟ 33ರ ಹರೆಯದ ವಿಕ್ಟರ್​ ಮಾರ್ಟಿನೋವ್​ ಎಂಬ ರಷ್ಯಾದ ಕೋಟ್ಯಾಧಿಪತಿಯೊಬ್ಬ ಬರೋಬ್ಬರಿ 720 ಮೈಲಿ ದೂರ ಹಾರಾಟ ನಡೆಸಿ ಮೆಕ್​ ಡಿ ತಲುಪಿದ್ದಾರೆ ಹಾಗೂ ಅವರು ಸರಿಸುಮಾರು 1,97,654.15 ರೂಪಾಯಿ ಖರ್ಚು ಮಾಡಿ ಬಿಗ್​ ಮ್ಯಾಕ್​ ಹಾಗೂ ಫ್ರೆಂಚ್​ ಫ್ರೈಸ್​ಗಳನ್ನ ಖರೀದಿ ಮಾಡಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...