ಯೂ ಟ್ಯೂಬ್ ಲೈವ್ನಲ್ಲಿ ಇರುವಾಗಲೇ ಪಾನಮತ್ತನಾಗಿದ್ದ ವೃದ್ಧನೋರ್ವ ಹಠಾತ್ ಸಾವಿಗೀಡಾದ ಘಟನೆ ರಷ್ಯಾದಲ್ಲಿ ನಡೆದಿದೆ. ಯೂ ಟ್ಯೂಬ್ ಲೈವ್ ಮಾಡಿದ್ದ 60 ವರ್ಷದ ವೃದ್ಧ ಲೀಟರ್ಗಟ್ಟಲೇ ವೋಡ್ಕಾ ಕುಡಿಯೋದಾಗಿ ಚಾಲೆಂಜ್ ಮಾಡಿದ್ದ. 1.5 ಲೀಟರ್ ವೋಡ್ಕಾ ಕುಡಿಯುತ್ತಿದ್ದಂತೆಯೇ ಈತ ಲೈವ್ನಲ್ಲೇ ಸಾವಿಗೀಡಾಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ.
ಗ್ರ್ಯಾಂಡ್ ಫಾದರ್ ಎಂಬ ಹೆಸರಿನಿಂದಲೇ ಫೇಮಸ್ ಆಗಿದ್ದ ಈ ರಷ್ಯಾದ ವೃದ್ಧ ಯೂ ಟ್ಯೂಬ್ನಲ್ಲಿ ಸದ್ಯ ಟ್ರೆಂಡ್ ಆಗಿದ್ದ ಟ್ರ್ಯಾಶ್ ಸ್ಟ್ರೀಮ್ಸ್ ಎಂಬ ಚಾಲೆಂಜ್ ಸ್ವೀಕರಿಸಿ ದುರಂತಕ್ಕೀಡಾಗಿದ್ದಾನೆ. ಈತ ಸಾವನ್ನಪ್ಪಿದ್ದನ್ನ ಅನೇಕ ಮಂದಿ ನೆಟ್ಟಿಗರು ಲೈವ್ನಲ್ಲೇ ನೋಡಿದ್ದಾರೆ. ಮೃತ 60 ವರ್ಷದ ವೃದ್ಧನನ್ನ ಯೂರಿ ಡಶೆಚ್ಕಿನ್ ಎಂದು ಗುರುತಿಸಲಾಗಿದೆ.