ರಷ್ಯಾದ ಪ್ರಸಿದ್ಧ ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ಕೊರೊನಾ ಸೋಂಕನ್ನ ಅಂಟಿಸಿಕೊಂಡಿದ್ದಾರೆ ಎಂದು ಗ್ರಾಹಕ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಕಲ್ಯಾಣ ಮೇಲ್ವಿಚಾರಣೆ ಫೆಡರಲ್ ಸೇವೆಯ ಮುಖ್ಯಸ್ಥ ಡಾ. ಅನ್ನಾ ಪೊಪೊವಾ ಆರೋಪಿಸಿದ್ದಾರೆ.
ವೈರಾಲೋಜಿಸ್ಟ್ ಆಗಿದ್ದ ಅಲೆಕ್ಸಾಂಡರ್ ಇಟಲಿಯ ಪ್ರವಾಸದ ವೇಳೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕೊರೊನಾ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕು ಅಂತಾ ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ಸೋಂಕಿಗೆ ಒಳಗಾಗಿದ್ದಾರೆ .
ನೊವೊಸಿ ಬ್ರಿಸ್ಕ್ನ ಇನ್ಸ್ಟಿಟ್ಯೂಟ್ ಆಫ್ ಕ್ಲಿನಕಲ್ & ಎಕ್ಸ್ಪೆರಿಮೆಂಟಲ್ ಮೆಡಿಸಿನ್ನಲ್ಲಿ ಹಿರಿಯ ಸಂಶೋಧಕರಾಗಿರುವ 69 ವರ್ಷದ ವೈರಾಲಾಜಿಸ್ಟ್, ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಸೋಂಕಿಗೆ ಒಳಗಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಅಲೆಕ್ಸಾಂಡರ್, ಮೊದಲ ಬಾರಿಗೆ ಸೋಂಕಿಗೆ ಒಳಗಾದ ಬಳಿಕ ಮೂರು ತಿಂಗಳಿಗೆ ಆಗುವಷ್ಟು ಪ್ರತಿಕಾಯಗಳು ನನ್ನ ದೇಹದಲ್ಲಿ ಉತ್ಪತ್ತಿಯಾಗಿದ್ದವು. ಮೊದಲ ಬಾರಿ ಸೋಂಕಿಗೀಡಾದಾಗ ಅದು ಅಂತರ ಗಂಭೀರ ಪ್ರಕರಣ ಆಗಿರಲಿಲ್ಲ. ಆದರೆ ಎರಡನೇ ಬಾರಿಗೆ ನಾನು ಆಸ್ಪತ್ರೆಗೆ ಸೇರಬೇಕಾಯಿತು. ಮೊದಲ ಬಾರಿಗೆ ಹೋಲಿಸಿದ್ರೆ ಎರಡನೇ ಬಾರಿ ನಾನು ಬೇಗನೇ ಸೋಂಕಿನಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದಾರೆ.