ಕೊರೋನಾ ಲಾಕ್‌ಡೌನ್ ನಿಂದ ಇಡೀ ವಿಶ್ವದ ಎಲ್ಲ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿವೆ. ಇದೀಗ ರಷ್ಯಾದ ಶೆಫ್ ಗಳು ಹೋಟೆಲ್ ಉದ್ಯಮದ ನಷ್ಟದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೋಟೆಲ್ ಆರಂಭಕ್ಕೆ ಅವಕಾಶ ನೀಡುವಂತೆ ಬೆತ್ತಲೆ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದಾರೆ.
ರಷ್ಯಾದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕಡಿಮೆಯಾಗುತ್ತಿರುವುದರಿಂದ ಹೋಟೆಲ್.ಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅಡುಗೆ ಪರಿಕರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ತೆರೆಯಲು ಅವಕಾಶ ನೀಡಬೇಕೆಂದು ಆರಂಭವಾಗಿರುವ ಪ್ರತಿಭಟನೆಯಲ್ಲಿ ನೂರಾರು ಹೋಟೆಲ್ ಮಾಲೀಕರು, ಸಿಬ್ಬಂದಿಗಳು ಭಾಗವಹಿಸಿದ್ದಾರೆ. ಬೆತ್ತಲೆಯಾಗಿ ತೆಗೆಸಿಕೊಂಡಿರುವ ಫೋಟೋದಲ್ಲಿ, ಮಾನ ಮುಚ್ಚಿಕೊಳ್ಳಲು ಕಪ್, ಪ್ಲೇಟ್, ಸಾಸರ್ ನ್ನು ಅಡ್ಡವಾಗಿರಿಸಿಕೊಂಡಿದ್ದಾರೆ. ಇದೀಗ ಈ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.