ತನ್ನ ಮಲಮಗನೊಂದಿಗಿನ ಸಂಬಂಧದಿಂದ ಮೊದಲ ಮಗುವನ್ನು ಪಡೆಯುತ್ತಿರುವುದಾಗಿ ಘೋಷಿಸಿದ್ದ ರಷ್ಯಾದ ಬ್ಲಾಗರ್ ಒಬ್ಬರು ಭಾರೀ ಸುದ್ದಿಯಲ್ಲಿದ್ದರು.
35 ವರ್ಷದ ಮಾರಿನಾ ಬಾಲ್ಮಶೇವ ಹೆಸರಿನ ಈಕೆ 21 ವರ್ಷದ ತನ್ನ ಮಲಮಗ ವ್ಲಾದಿಮೀರ್ ವೋವ ಶವ್ರಿನ್ನೊಂದಿಗಿನ ಸಂಬಂಧವನ್ನು ಈಗ ವೈವಾಹಿಕ ಜೀವನಕ್ಕೆ ಕೊಂಡೊಯ್ಯುವ ತರಾತುರಿಯಲ್ಲಿದ್ದಾರೆ.
ತಮ್ಮ ಮಾಜಿ ಪತಿಯ ಮಗ ವ್ಲಾದಿಮಿರ್ರನ್ನು ಮಾರಿನಾ ಮದುವೆಯಾಗಿದ್ದು, ತಮ್ಮ ಹೆಣ್ಣುಮಗುವನ್ನು ಜಗತ್ತಿಗೆ ಸ್ವಾಗತಿಸಲು ವೇದಿಕೆ ಸೃಷ್ಟಿಸಿಕೊಂಡಿದ್ದರು. ಈ ಹೊಸ ಜೋಡಿ ಈಗ ಹೆಣ್ಣುಮಗುವಿನ ಪೋಷಕರಾಗಿದ್ದಾರೆ.
ವ್ಲಾದಿಮೀರ್ ತಂದೆ ಅಲೆಕ್ಸೆ ಶವ್ರಿನ್ ಅವರನ್ನು ಮಾರಿನಾ ಮದುವೆಯಾದಾಗ ಆತನಿಗೆ ಬರೀ 11 ವರ್ಷವಾಗಿತ್ತು. ತನ್ನ ಮಾಜಿ ಪತಿಯೊಂದಿಗೆ 10 ವರ್ಷ ಸಂಸಾರ ಮಾಡಿದ ಬಳಿಕ ಆತನಿಗೆ ಗುಡ್ಬೈ ಹೇಳಿರುವ ಮಾರಿನಾ, ತನ್ನ ಹೊಸ ಪತಿಗೆ ಆಕರ್ಷಕವಾಗಿ ಕಾಣಲೆಂದು ಸಾಕಷ್ಟು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.
https://www.instagram.com/p/CIvo7ywnhJE/?utm_source=ig_web_copy_link
https://www.instagram.com/p/CHrfSGqHAs6/?utm_source=ig_embed
https://www.instagram.com/p/CGiEQ-8nFnp/?utm_source=ig_embed