ಮಾಸ್ಕೋ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆಯುವ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು ಅಂತಿಮಹಂತದ ಪ್ರಯೋಗಗಳು ಬಾಕಿ ಇವೆ. ಅನೇಕ ದೇಶಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ವಿವಿಧ ಹಂತಗಳ ಪ್ರಯೋಗ ಯಶಸ್ವಿಯಾಗಿದೆ. ಮಾನವ ಕ್ಲಿನಿಕಲ್ ಪ್ರಯೋಗ ಮುಂದುವರೆದಿದೆ.
ಹೀಗಿರುವಾಗಲೇ ರಷ್ಯಾದಿಂದ ಸಿಹಿ ಸುದ್ದಿ ಸಿಕ್ಕಿದೆ. ಆಗಸ್ಟ್ 10 ರಂದು ಕೊರೋನಾ ಲಸಿಕೆಯ ಬಗ್ಗೆ ಘೋಷಣೆ ಮಾಡುವುದಾಗಿ ರಷ್ಯಾ ತಿಳಿಸಿದೆ. ಇದು ಸಾಧ್ಯವಾದಲ್ಲಿ ಸರ್ಕಾರವೊಂದು ಘೋಷಿಸಿದ ವಿಶ್ವದ ಮೊದಲ ಕೊರೋನಾ ತಡೆ ಲಸಿಕೆ ಇದಾಗಲಿದೆ.
ಮಾಸ್ಕೋ ಗಮಾಲೆ ಇನ್ ಸ್ಟಿಟ್ಯೂಟ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಇದನ್ನು ಪಡೆದುಕೊಳ್ಳಲಿದ್ದಾರೆ. ಮೊದಲ ಹಂತದ ಪ್ರಯೋಗದ ಫಲಿತಾಂಶ ಬಂದಿದೆ ಎಂದು ಹೇಳಿದ್ದು ಎರಡನೇ ಹಂತದ ಪ್ರಯೋಗ ಆರಂಭವಾಗಲಿದೆ. ಆಗಸ್ಟ್ 10 ಕ್ಕೆ ಲಸಿಕೆಯ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.