ಮಾಸ್ಕೋ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ತಡೆಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಈಗಾಗಲೇ ಅನೇಕ ಲಸಿಕೆಗಳು ಯಶಸ್ವಿಯಾಗಿವೆ ಎಂದು ಲಸಿಕೆ ಅಭಿವೃದ್ಧಿ ಪಡಿಸಿದ ಸಂಶೋಧಕರು, ತಜ್ಞರು ಹೇಳಿಕೊಂಡಿದ್ದಾರೆ.
ರಷ್ಯಾದಲ್ಲಿ ಕೊರೋನಾ ವೈರಸ್ ತಡೆಗೆ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಾಗುವುದು. ಆಗಸ್ಟ್ ನಲ್ಲಿ ಮೂರನೇ ಹಂತದ ಪ್ರಯೋಗ ಕೈಗೊಂಡ ನಂತರ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಆದರೆ, ಇದಕ್ಕಿಂತ ಮೊದಲೇ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಗುಪ್ತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಕೋಟ್ಯಧಿಪತಿಗಳು, ಶ್ರೀಮಂತ ಉದ್ಯಮಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಪ್ರಮುಖ ಕಂಪನಿಗಳ ಸಿಇಒಗಳು ಪ್ರಭಾವ ಬಳಸಿ ಲಸಿಕೆಗಳನ್ನು ಪಡೆದುಕೊಳ್ಳುತ್ತಿದ್ದು, ಬಿಡುಗಡೆಗೂ ಮೊದಲೇ ಪ್ರಭಾವಿಗಳಿಗೆ ಲಸಿಕೆ ರಹಸ್ಯವಾಗಿ ತಲುಪುತ್ತಿದೆ ಎಂದು ಹೇಳಲಾಗಿದೆ.