alex Certify ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ಪ್ರಯೋಗಕ್ಕೆ ಮತ್ತೊಂದು ವಿಘ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ರಷ್ಯಾದ ಕೊರೊನಾ ಲಸಿಕೆ ಪ್ರಯೋಗಕ್ಕೆ ಮತ್ತೊಂದು ವಿಘ್ನ

ವರ್ಷದ ಅಂತ್ಯದೊಳಗಾಗಿ ಕೊರೊನಾಗೆ ಕಡಿವಾಣ ಹಾಕಲು ಪಣ ತೊಟ್ಟಿದ್ದ ರಷ್ಯಾಗೆ ಕೊಂಚ ಹಿನ್ನಡೆಯಾಗಿದೆ. ಡೋಸೇಜ್​ಗಳ ಕೊರತೆಯಿಂದಾಗಿ ಕೊರೊನಾ ಲಸಿಕೆಯ ಪ್ರಯೋಗವನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಈಗಾಗಲೇ ಕೊರೊನಾ ಲಸಿಕೆಗೆ ಭಾರೀ ಬೇಡಿಕೆ ಉಂಟಾಗಿದೆ. ಹೀಗಾಗಿ ಪ್ರಯೋಗ ಹಂತದಲ್ಲಿ ಬಳಕೆ ಮಾಡಲು ಸಾಕಾಗುವಷ್ಟು ಡೋಸ್​ಗಳನ್ನ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ ಅಂತಾ ರಷ್ಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಾಸ್ಕೋದ ಚಿಕಿತ್ಸಾಲಯಗಳಲ್ಲಿ ನಡೆಯಬೇಕಿದ್ದ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕವಾಗಿ ವಿರಾಮ ಬಿದ್ದಂತಾಗಿದೆ. ನವೆಂಬರ್​ 10ರ ಬಳಿಕ ಲಸಿಕೆ ಪ್ರಯೋಗ ಕಾರ್ಯ ಮುಂದುವರಿಯಲಿದೆ ಅಂತಾ ಮೂಲಗಳು ತಿಳಿಸಿವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಲಸಿಕೆ ಉತ್ಪಾದನೆ ಹೆಚ್ಚಿಸಲು ನಮ್ಮ ಬಳಿ ಉಪಕರಣ ಅಲಭ್ಯತೆ ಸೇರಿದಂತೆ ಸಾಕಷ್ಟು ಸವಾಲುಗಳಿವೆ. ಆದರೂ ಈ ಸವಾಲುಗಳನ್ನ ಹಿಮ್ಮೆಟ್ಟಿ ವರ್ಷಾಂತ್ಯದ ವೇಳೆ ಲಸಿಕೆ ಸಿದ್ದಪಡಿಸುತ್ತೇವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ಆಗಸ್ಟ್ ತಿಂಗಳಲ್ಲಿ ಕೋವಿಡ್​ ಲಸಿಕೆ ದಾಖಲಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ರಷ್ಯಾದ ಸಂಭಾವ್ಯ ಕೊರೊನಾ ಲಸಿಕೆ ಈವರೆಗೆ ಯಾವುದೇ ಅಡ್ಡಪರಿಣಾಮ ತೋರಿಸಿಲ್ಲ ಅಂತಾ ವರದಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...