ಕೊರೊನಾಗಾಗಿ ಸ್ಪುಟ್ನಿಕ್ ಲಸಿಕೆ ಸಿದ್ಧ ಮಾಡ್ತಿರುವ ರಷ್ಯಾ ತನ್ನ ಲಸಿಕೆಯ ತ್ವರಿತ ನೋಂದಣಿಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ಸಾಮಾನ್ಯ ಲಸಿಕೆಗೆ ಪರವಾನಿಗೆ ಪಡೆಯುವುದಕ್ಕಿಂತ ಕಡಿಮೆ ಅವಧಿಯಲ್ಲಿ ಜಾಗತಿಕವಾಗಿ ಲಭ್ಯವಾಗುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಅಂತಾ ರಷ್ಯಾ ಅಧಿಕೃತ ಹೇಳಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಔಷಧಿಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮ ಆಧರಿಸಿ ಪರವಾನಿಗೆಯನ್ನ ನೀಡುತ್ತದೆ. ಹೀಗಾಗಿ ರಷ್ಯಾದ ಆರ್ಡಿಐಎಫ್ ಸ್ಪುಟ್ನಿಕ್ ವಿ ಲಸಿಕೆಯ ತ್ವರಿತ ನೋಂದಣಿ ಹಾಗೂ ಪೂರ್ವ ಅರ್ಹತೆಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದೇವೆ ಅಂತಾ ರಷ್ಯಾ ರಾಯಭಾರ ಕಚೇರಿ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.
ಇನ್ನು ಲಸಿಕೆ ಪರವಾನಿಗೆ ವಿಚಾರವಾಗಿ ಮಾತನಾಡಿದ ರಷ್ಯಾ ನೇರ ಹೂಡಿಕೆ ನಿಧಿ ಸಿಇಒ ಕಿರಿಲ್ ಡಿಮಿಟ್ರಿವ್, ಸ್ಪುಟ್ನಿಕ್ ವಿ ಲಸಿಕೆಯನ್ನ ಸುರಕ್ಷಿತ, ಪರಿಣಾಮಕಾರಿ ಹಾಗೂ ಉತ್ತಮ ಅಧ್ಯಯನದ ವೇದಿಕೆಯಲ್ಲಿ ತಯಾರಿಸಲಾಗಿದೆ ಅಂತಾ ಹೇಳಿದ್ರು.