
ಮಾಸ್ಕೋ: ರಷ್ಯಾ ಕೊರೊನಾ ಸೋಂಕು ತಡೆಗೆ ವಿಶ್ವದಲ್ಲೇ ಮೊದಲ ಲಸಿಕೆಯನ್ನು ಸಿದ್ಧಪಡಿಸಿರುವುದಾಗಿ ಹೇಳಿದೆ. ಸ್ಪುಟ್ನಿಕ್ ಹೆಸರಿನ ಲಸಿಕೆಯನ್ನು ಔಷಧ ತಯಾರಿಕಾ ಘಟಕದಲ್ಲಿ ಉತ್ಪಾದಿಸಲಾಗಿದೆ.
ರಷ್ಯಾ ಆರೋಗ್ಯ ಸಚಿವಾಲಯ ಕೊರೋನಾ ಲಸಿಕೆ ಉತ್ಪಾದನೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದು ಸಿಸ್ಟೆಮಾ ಕಂಪನಿ ಉತ್ಪಾದಿಸಿದ ಮೊದಲ ಬ್ಯಾಚ್ ಲಸಿಕೆ ಸಿದ್ಧವಾಗಿದೆ. ಜನವರಿ ತಿಂಗಳವರೆಗೆ ಪ್ರತಿ ತಿಂಗಳು 50 ಲಕ್ಷ ಡೋಸ್ ಲಸಿಕೆಯನ್ನು ಉತ್ಪಾದಿಸಲಾಗುವುದು.
ಈ ಲಸಿಕೆಯನ್ನು ಮೊದಲಿಗೆ ವೈದ್ಯರು, ಆರೋಗ್ಯ ಸೇವೆಯಲ್ಲಿ ನಿರತರಾದ ಸಿಬ್ಬಂದಿ ಮತ್ತು ಶಿಕ್ಷಕರಿಗೆ ನೀಡಲಾಗುವುದು ಎಂದು ಅಧ್ಯಕ್ಷ ವ್ಲಾಡಿಮರ್ ಪುಟಿನ್ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ ನಲ್ಲಿ ಸಾರ್ವಜನಿಕ ಅಭಿಯಾನದ ಮೂಲಕ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.