ರಷ್ಯಾದಿಂದ ಒಳ್ಳೆ ಸುದ್ದಿಯೊಂದು ಬಂದಿದೆ. ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಎರಡು ವಾರದೊಳಗೆ ಕೊರೊನಾಗೆ ಲಸಿಕೆ ಹೊರ ಬರಲಿದೆ. ಆಗಸ್ಟ್ 10 ಅಥವಾ ಅದಕ್ಕಿಂತ ಮೊದಲೇ ಲಸಿಕೆ ತರಲು ತಯಾರಿ ನಡೆಸಲಾಗ್ತಿದೆ.
ಮಾಸ್ಕೋದ ಗಮಾಲಯ ಸಂಸ್ಥೆ ಲಸಿಕೆ ಸಿದ್ಧಪಡಿಸಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು. ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಬಿಟ್ಟಾಗ ಅಮೆರಿಕಾ ಅಚ್ಚರಿಗೊಂಡಿತ್ತು. ಈಗ್ಲೂ ಇದೇ ಸಂದರ್ಭ ಬರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಲಸಿಕೆ ಪ್ರಯೋಗದ ಬಗ್ಗೆ ರಷ್ಯಾ ಇನ್ನೂ ಯಾವುದೇ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಲಸಿಕೆಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ರಾಜಕೀಯ ಒತ್ತಡವಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದಲ್ಲದೆ, ಲಸಿಕೆಯ ಅಪೂರ್ಣ ಮಾನವ ಪ್ರಯೋಗದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.